25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ ಆಗಿತ್ತು: ಸಾಧು ಕೋಕಿಲ

Updated on: Apr 14, 2025 | 4:22 PM

ಹಿರಿಯ ನಟ ಬ್ಯಾಂಕ್ ಜನಾರ್ದನ್ ಅವರ ನಿಧನಕ್ಕೆ ಸಾಧು ಕೋಕಿಲ ಅವರು ಕಂಬನಿ ಮಿಡಿದಿದ್ದಾರೆ. ಜನಾರ್ದನ್ ಅವರಿಗೆ ಬಹಳ ವರ್ಷಗಳ ಹಿಂದೆಯೇ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂದು ಅವರು ಹೇಳಿದ್ದಾರೆ. ಇಂದು (ಏಪ್ರಿಲ್ 14) ಅಂತಿಮ ದರ್ಶನ ಪಡೆದ ಬಳಿಕ ಸಾಧು ಕೋಕಿಲ ಅವರು ಈ ವಿಷಯ ಹಂಚಿಕೊಂಡರು.

ಹಾಸ್ಯ ನಟರಾದ ಸಾಧು ಕೋಕಿಲ ಮತ್ತು ಬ್ಯಾಂಕ್ ಜನಾರ್ದನ್ (Bank Janardhan) ಅವರು ನೂರಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇಂದು (ಏ.14) ಬ್ಯಾಂಕ್ ಜನಾರ್ದನ್ ಅಗಲಿಕೆಗೆ ಸಾಧು ಕೋಕಿಲ (Sadhu Kokila) ಕಂಬನಿ ಮಿಡಿದಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ಜನಾರ್ದನ್ ಅವರಿಗಾಗಿ ಚಲನಚಿತ್ರ ಅಕಾಡೆಮಿಯಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೆ ನಾನೇ ಜ್ಯೂರಿ ಆಗಿದ್ದೆ. ಜನಾರ್ದನ್ ಅವರಿಗೆ ಈ ಪ್ರಶಸ್ತಿ ಕೊಡಲೇಬೇಕು ಅಂತ ಹೇಳಿದ್ದೆ. ಯಾಕೆಂದರೆ, ಅವರಿಗೆ ಹಾರ್ಟ್ ಪ್ರಾಬ್ಲಂ ಇದೆ ಅಂತ ಹೇಳಿದ್ದೆ. ಅಂದಾಜು 25 ವರ್ಷಗಳ ಮುಂಚೆಯೇ ಅವರಿಗೆ ಹಾರ್ಟ್ ಪ್ರಾಬ್ಲಂ ಆಗಿತ್ತು. ಅವರ ಋಣ ಈ ಭೂಮಿಗೆ ಇಷ್ಟೇ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸಾಧು ಕೋಕಿಲ ಹೇಳಿದ್ದಾರೆ. ಅವರ ಜೊತೆ ಉಪೇಂದ್ರ (Upendra) ಕೂಡ ಅಂತಿಮ ದರ್ಶನ ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More