ಇಂದಿನಿಂದ ಎಟಿಎಂಗಳಲ್ಲಿ ನಡೆಸುವ ನಗದು ವಹಿವಾಟುಗಳಿಗೆ ಹೆಚ್ಚು ಸೇವಾಶುಲ್ಕ, ₹ 21ರ ಬದಲು ₹ 23 ತೆರಬೇಕು!
ರೇಲ್ವೇ ಇಲಾಖೆಯೂ ಕೆಲ ಮಾರ್ಪಾಟುಗಳನ್ನು ಮಾಡಿದೆ. ಟಿಕೆಟ್ ಬುಕ್ ಮಾಡುವಾಗ ವೇಟಿಂಗ್ ಲಿಸ್ಟ್ ನಲ್ಲಿ ಹೆಸರು ದಾಖಲಾದರೆ, ಆ ಟಿಕೆಟ್ ಹಿಡಿದು ಸ್ಲೀಪ್ ಕ್ಲಾಸ್ ಬೋಗಿ ಪ್ರವೇಶಿಸುವಂತಿಲ್ಲ, ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸಬಹುದು. ಹಾಗೆಯೇ, ಅಡ್ವಾನ್ಸ್ ಬುಕ್ಕಿಂಗ್ ಅವಧಿಯನ್ನು ಮೊದಲಿದ್ದ 4 ತಿಂಗಳಿಗೆ ಬದಲು ಎರಡು ತಿಂಗಳಿಗೆ ಇಳಿಸಲಾಗಿದೆ.
ಬೆಂಗಳೂರು, ಮೇ 1: ಕೆಲವರಿಗೆ ಅದು ಅಭ್ಯಾಸ. ದುಡ್ಡನ್ನು ವ್ಯಾಲೆಟ್ಗಳಲ್ಲಿ ಹೊತ್ತುಕೊಂಡು ತಿರುಗುವ ಬದಲು ಬ್ಯಾಂಕಲ್ಲಿ ಇಡೋದು ಲೇಸು ಅಂತ ಭಾವಿಸಿ ಹಣವನ್ನು ಅಲ್ಲೇ ಉಳಿಸಿ ದಿನದ ಖರ್ಚಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಎಟಿಎಂ ಗೆ (ATM kiosks) ಹೋಗಿ ವಿತ್ಡ್ರಾ ಮಾಡುತ್ತಾರೆ. ಡಿಜಿಟಲ್ ಪೇಮೆಂಟ್ಗಳು ಶುರುವಾದ ಮೇಲೆ ಎಟಿಎಂಗೆ ಹೋಗೋದು ಕಮ್ಮಿಯಾಗಿದೆ ಅನ್ನೋದು ಬೇರೆ ವಿಚಾರ. ಆದರೆ ಗಳಿಗೆಗೊಮ್ಮೆ ಎಟಿಎಂಗೆ ಹೋಗುವವರು ಇವತ್ತಿನಿಂದ ತಮ್ಮ ಪ್ರವೃತ್ತಿಯನ್ನು ಬದಲಾಯಿಸಬೇಕಾಗಬಹುದು. ಆರ್ಬಿಐ ನಿರ್ದೇಶನದ ಪ್ರಕಾರ ಮೂರು ಉಚಿತ ಎಟಿಎಂ ವಹಿವಾಟಿನ ನಂತರ ನಡೆಸುವ ಪ್ರತಿ ನಗದು ವಹಿವಾಟಿಗೆ ರೂ 23 ಸೇವಾ ಶುಲ್ಕವನ್ನು ಬ್ಯಾಂಕ್ ಗಳು ವಿಧಿಸಲಿವೆ. ಮೊದಲಾದರೆ ರೂ. 21 ಸೇವಾ ಶುಲ್ಕವನ್ನು ಬ್ಯಾಂಕ್ಗಳು ಗ್ರಾಹಕರ ಮೇಲೆ ವಿಧಿಸುತ್ತಿದ್ದವು.
ಇದನ್ನೂ ಓದಿ: ಎಟಿಎಂನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಶುಲ್ಕವೇ; ಮೇ 1ರಿಂದ ಇಂಟರ್ಚೇಂಜ್ ಫೀಸ್ ಹೆಚ್ಚಳ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
