AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CTR proposal approved: ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾವನದಲ್ಲಿ ಶೀಘ್ರದಲ್ಲೇ ಆನೆ ಸಫಾರಿ ಪುನರಾರಂಭಗೊಳ್ಳಲಿದೆ!

CTR proposal approved: ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾವನದಲ್ಲಿ ಶೀಘ್ರದಲ್ಲೇ ಆನೆ ಸಫಾರಿ ಪುನರಾರಂಭಗೊಳ್ಳಲಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 25, 2023 | 8:02 AM

Share

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಮತ್ತು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ರ ಅಡಿಯಲ್ಲಿ ಉತ್ತರಾಖಂಡ್ ಉಚ್ಚ ನ್ಯಾಯಾಲಯವು 2018 ರಲ್ಲಿ ಆನೆಗಳ ವಾಣಿಜ್ಯ ಬಳಕೆಯನ್ನು ನಿಷೇಧಿಸಿತ್ತು.

ನೈನಿತಾಲ್ (ಉತ್ತರಾಖಂಡ): ಜಿಲ್ಲೆಯ ರಾಮನರದಲ್ಲಿರುವ ಜಿಮ್ ಕಾರ್ಬೆಟ್ (Jim Corbett Park) ರಾಷ್ಟ್ರೀಯ ಉದ್ಯಾವನದಲ್ಲಿ ((Jim Corbett Park) 2018ರಿಂದ ನಿಷೇಧಕ್ಕೊಳಗಾಗಿದ್ದ ಆನೆ ಸಫಾರಿ (Elephant Safari ) ಇಷ್ಟರಲ್ಲೇ ಪುನರರಾರಂಭಗೊಳ್ಳಲಿದೆ. ಜಿಮ್ ಕಾರ್ಬೆಟ್ ರಾಷ್ಟ್ರೀಯ (ಸಿಟಿಆರ್) ಉದ್ಯಾವನದ ಹುಲಿ ಸಂರಕ್ಷಣೆ ಪ್ರತಿಷ್ಠಾನದ (tiger reserve) 9 ನೇ ಸಭೆಯಲ್ಲಿ ವಿಷಯದ ಮೇಲೆ ಚರ್ಚೆ ನಡೆದಿದ್ದು ಆನೆ ಸಫಾರಿ ಅತಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.

ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ: ಬಿಬಿಎಂಪಿ ಹೆಚ್ಚುವರಿ ನಿರ್ದೇಶಕ ಗಂಗಾಧರಯ್ಯ ಮನೆಯಲ್ಲಿ ಸಿಕ್ತು ವಿದೇಶಿ ಕರೆನ್ಸಿ, ನಗದು, ಚಿನ್ನ!

‘ಒಂಭತ್ತನೇ ಸಭೆಯಲ್ಲಿ ನಮ್ಮ ಪ್ರಸ್ತಾವನೆಗಳಿಗೆ ಮಂಜೂರಿ ಸಿಕ್ಕಿದೆ. ಮಾನ್ಯ ಹೈಕೋರ್ಟ್ ಆದೇಶದ ಮೇರೆಗೆ ನಿಷೇಧಿಸಲಾಗಿದ್ದ ಅನೆ ಸಫಾರಿ ಪುನರಾರಂಭಿಸುವುದು ನಮ್ಮ ಪ್ರಸ್ತಾವನೆಗಳಲ್ಲಿ ಒಂದಾಗಿತ್ತು. ಸಮಿತಿಯ ಕೊನೆಯ ಸಭೆ ಮುಂದಿನ ವಾರ ನಡೆಯಲಿದೆ ಮತ್ತು ಸಫಾರಿ ಆರಂಭಿಸುವ ಬಗ್ಗೆ ಅಂತಿಮ ನಿರ್ಣಯ ಆ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು,’ ಎಂದು ಸಿಟಿಆರ್ ಉಪ-ನಿರ್ದೇಶಕ ದಿಗಂತ್ ನಾಯಕ್ ಹೇಳುತ್ತಾರೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಮತ್ತು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ರ ಅಡಿಯಲ್ಲಿ ಉತ್ತರಾಖಂಡ್ ಉಚ್ಚ ನ್ಯಾಯಾಲಯವು 2018 ರಲ್ಲಿ ಆನೆಗಳ ವಾಣಿಜ್ಯ ಬಳಕೆಯನ್ನು ನಿಷೇಧಿಸಿತ್ತು.

ಇದನ್ನೂ ಓದಿ: ಮಧ್ಯಪ್ರದೇಶ: ₹17,000 ಕೋಟಿ ವೆಚ್ಚದ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

‘ಇಲಾಖೆ ಆನೆ ಸಫಾರಿ ಪುನರಾರಂಭಿಸುವ ವಿಷಯ ಗೊತ್ತಾಗಿ ನಮಗೆಲ್ಲ ಬಹಳ ಸಂತೋಷವಾಗಿದೆ. ಜನ ಸಫಾರಿ ಮಾಡುತ್ತಾ ವನ್ಯ ಪ್ರಾಣಿಗಳನ್ನು ನೋಡಬಹುದು ಮತ್ತು ಆನೆಗಳನ್ನು ಸಾಕುವ ಜನರಿಗೆ ಮತ್ತು ಮಾವುತರಿಗೆ ಆದಾಯದ ಮೂಲ ಸೃಷ್ಟಿಯಾಗಲಿದೆ. ಅವರಿಗೂ ಬಹಳ ಸಂತೋಷವಾಗಿರುತ್ತದೆ,’ ಎಂದು ವನ್ಯಜೀವಿ ಪ್ರೇಮಿ ಸಂಜಯ್ ಚಿಮ್ವಲ್ ಹೇಳುತ್ತಾರೆ.

ಅದು ನಿಜ. ಸಫಾರಿ ನಿಂತಾಗಿನಿಂದ ಎರಡು ಹೊತ್ತಿನ ಅನ್ನ ಸಂಪಾದಿಸಲು ಪರದಾಡುತ್ತಿರುವ ಮಾವುತರು ಮತ್ತು ಆನೆಗಳನ್ನು ಸಾಕಿದವರಿಗೆ ಸಫಾರಿ ಮತ್ತೇ ಆರಂಗೊಳ್ಳಲಿರುವ ಸುದ್ದಿ ನಿರಾಳವಾಗಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ