ನಿಷೇಧಕ್ಕೊಳಗಾದ ನಂತರವೂ ಪಿಎಫ್​ಐ ಸಂಘಟನೆಯಿಂದ ಆರೆಸ್ಸೆಸ್ ಕಾರ್ಯಕರ್ತರಿಗೆ ಎಚ್ಚರಿಕೆ!

Edited By:

Updated on: Oct 04, 2022 | 12:40 PM

ಸ್ಥಳೀಯರು ಹತ್ತಿರದ ಪುಂಜಲ್ ಕಟ್ಟೆಪೊಲೀಸ ಠಾಣೆಗೆ ದೂರು ಸಲ್ಲಿಸಿದ ನಂತರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು: ನಿಷೇಧಕ್ಕೊಳಗಾದರೂ ಪಿಎಫ್ ಐ (PFI) ಕಾರ್ಯಕರ್ತರ ಉಪಟಳ ನಿಂತಿಲ್ಲ ಮಾರಾಯ್ರೇ. ಬಂಟ್ವಾಳ ತಾಲ್ಲೂಕಿನ ಸ್ನೇಹಗಿರಿ ರಸ್ತೆಯ ಮೇಲೆ ಕೆಲ ಪಿ ಎಫ್ ಐ ಕಾರ್ಯಕರ್ತರು ಪ್ರದರ್ಶಿರುವ ಉದ್ಧಟತನವನ್ನು ಗಮನಿಸಿ. ಚಡ್ಡಿಗಳೇ (RSS) ಎಚ್ಚರ, ನಾವು ವಾಪಸ್ಸು ಬರುತ್ತೇವೆ ಅಂತ ರಸ್ತೆ ಮೇಲೆ ಬರೆದಿದ್ದಾರೆ. ಸ್ಥಳೀಯರು ಹತ್ತಿರದ ಪುಂಜಲ್ ಕಟ್ಟೆ (Punjal Katte) ಪೊಲೀಸ ಠಾಣೆಗೆ ದೂರು ಸಲ್ಲಿಸಿದ ನಂತರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.