ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ!

Edited By:

Updated on: Jul 25, 2025 | 7:05 PM

ದೇಶದಲ್ಲಿಯೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆ ಅಡಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಾಲ್ಕು ಸಾಕಾನೆಗಳನ್ನು ಜಪಾನ್ ದೇಶಕ್ಕೆ ರವಾನೆ ಮಾಡಲಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್‌ ದೇಶದ ಓಸಾಕಾ ಕಾನ್ಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನೆ ಮಾಡಲಾಗಿದೆ. ಕಾತಾರ್ ಏರ್ವೇಸ್ ಸರಕು ಸಾಕಾಣೆ ವಿಮಾನದ ಮೂಲಕ ಜಪಾನ್ ಗೆ ಯಶಸ್ವಿಯಾಗಿ ರವಾನಿಸಲಾಗಿದೆ.

ಬೆಂಗಳೂರು, (ಜುಲೈ 25): ದೇಶದಲ್ಲಿಯೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆ ಅಡಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಾಲ್ಕು ಸಾಕಾನೆಗಳನ್ನು ಜಪಾನ್ ದೇಶಕ್ಕೆ ರವಾನೆ ಮಾಡಲಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್‌ ದೇಶದ ಓಸಾಕಾ ಕಾನ್ಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನೆ ಮಾಡಲಾಗಿದೆ. ಕಾತಾರ್ ಏರ್ವೇಸ್ ಸರಕು ಸಾಕಾಣೆ ವಿಮಾನದ ಮೂಲಕ ಜಪಾನ್ ಗೆ ಯಶಸ್ವಿಯಾಗಿ ರವಾನಿಸಲಾಗಿದೆ. ಓಸಾಕಾ ಕಾನ್ಲೈ ವಿಮಾನ ನಿಲ್ದಾಣದಿಂದ ಟ್ರಕ್ ಗಳ ಮೂಲಕ ಆನೆಗಳಿದ್ದ ಕೇಜ್ ಗಳನ್ನ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ರವಾನಿಸಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ 1 ಗಂಡು ಮತ್ತು 3 ಹೆಣ್ಣು ಆನೆಗಳ ಏರ್ ಲಿಫ್ಟ್​ ಮಾಡಲಾಗಿದೆ. ಸುರೇಶ್ (8), ಗೌರಿ ( 9 ), ಶ್ರುತಿ(7) ತುಳಸಿ (5) ಆನೆಗಳು ಜಪಾನ್ ತೆರಳಿವೆ. ಆನೆಗಳ ಜೊತೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಸಹ ತೆರಳಿದ್ದಾರೆ.

Loading...
Unable to load recommendations.
Follow Us