Karnataka Assembly Polls: ವಿಜಯಪುರದಲ್ಲಿ ಬಸನಗೌಡ ಯತ್ನಾಳ್ ಭರ್ಜರಿ ರೋಡ್ ಶೋ, ಸಾವಿರಾರು ಕಾರ್ಯಕರ್ತರು ರ‍್ಯಾಲಿಯಲ್ಲಿ ಭಾಗಿ
ರೋಡ್ ಶೋನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಟೌಟ್ ಗಳು ರಾರಾಜಿಸಿದವು.
ವಿಜಯಪುರ: ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಭರ್ಜರಿ ರೋಡ್ ಶೋ ನಡೆಸಿದರು. ರ‍್ಯಾಲಿ ಜಾರಿಯಲ್ಲಿದ್ದಾಗಲೇ ಕಾರ್ಯಕರ್ತರು ಯತ್ನಾಳ್ ಅವರಿಗೆ ಕಂಬಳಿ ಹೊದಿಸಿ ಗೌರವಿಸಿದರು. ರೋಡ್ ಶೋನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಕಟೌಟ್ ಗಳು ರಾರಾಜಿಸಿದವು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಜೈ ಶ್ರೀರಾಮ್ (Jai Sriram) ಮತ್ತು ಜೈ ಬಜರಂಗ ಬಲೀ (Jai Bajrang Bali) ಘೋಷಣೆಗಳನ್ನು ಕೂಗಿದರು. ತಮ್ಮ ಗೆಲುವಿನ ಬಗ್ಗೆ ಮೊದಲು ಅತೀವ ವಿಶ್ವಾಸ ಹೊಂದಿದ್ದ ಯತ್ನಾಳ್ ರನ್ನು ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಕೊಂಚ ಅಧೀರಗೊಳಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos