ಶಿಸ್ತು ಸಮಿತಿಯ ನೋಟೀಸ್​ಗೆ ಉತ್ತರಿಸಲು ಸಮಯ ಕೇಳಿದ ಬಸನಗೌಡ ಯತ್ನಾಳ್, ವರಿಷ್ಠರ ಮಧ್ಯಪ್ರವೇಶದ ನಿರೀಕ್ಷೆ?

Updated on: Feb 15, 2025 | 11:08 AM

ಬಸನಗೌಡ ಯತ್ನಾಳ್ ಎದುರಾಳಿ ಬಿವೈ ವಿಜಯೇಂದ್ರ ಎಲ್ಲ ಶಾಟ್​ಗಳನ್ನು ಆಡುತ್ತಿರುವುದು ಮತ್ತು ವಿಜಯಪುರ ಶಾಸಕ ಬ್ಯಾಕ್​ಫುಟ್ ನಲ್ಲಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಗುರವಾರದಂದು ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ ಮತ್ತು ರಾಜ್ಯಕ್ಕೆ ಹಿಂತಿರುಗಿದ ನಂತರ ಗೆಲುವಿನ ನಗೆ ಬೀರುತ್ತಿದ್ದಾರೆ. ದೆಹಲಿಯಲ್ಲಿ ಅವರು ಯಾರನ್ನು ಭೇಟಿಯಾಗಿದ್ದರು, ಮಾತುಕತೆ ಏನು ನಡೆಯಿತು ಅಂತ ಗೊತ್ತಾಗಿಲ್ಲ.

ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರೀಯ ಶಿಸ್ತು ಸಮಿತಿ ನೋಟೀಸೊಂದನ್ನು ಜಾರಿ ಮಾಡಿದ್ದು ಹಳೆಯ ಸುದ್ದಿ ಅದರೆ ಅದಕ್ಕೆ ಅವರು ಇನ್ನೂ ಉತ್ತರ ನೀಡಿಲ್ಲದಿರುವುದು ಜಾರಿಯಲ್ಲಿರುವ ಸುದ್ದಿ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ನೋಟೀಸ್ ಗೆ ಉತ್ತರ ನೀಡಲು ಯತ್ನಾಳ್ ಹೈಕಮಾಂಡ್ ನಿಂದ ಕಾಲಾವಕಾಶ ಕೇಳಿದ್ದಾರೆ. ಒಂದು ಮೂಲದ ಪ್ರಕಾರ ಶೋಕಾಸ್ ನೋಟೀಸ್ ವಿಷಯದಲ್ಲಿ ವರಿಷ್ಠರು ಮಧ್ಯಪ್ರವೇಶ ಮಾಡುವ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದಾರೆ. ಈ ಹಿಂದೆ ಜಾರಿ ಮಾಡಿದ್ದ ನೋಟೀಸ್​​ಗೂ ಅವರು ಕೂಡಲೇ ಉತ್ತರ ನೀಡಿರಲಿಲ್ಲ ಎನ್ನವುದು ಗಮನಿಸಬೇಕಿರುವ ಸಂಗತಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯ ಬಿಜೆಪಿಯಲ್ಲಿರುವ ಬಂಡಾಯವನ್ನು ಆದಷ್ಟು ಬೇಗ ಶಮನಗೊಳಿಸುವ ಸೂಚನೆ ವರಿಷ್ಠರು ನೀಡಿದ್ದಾರೆ: ಬಿವೈ ವಿಜಯೇಂದ್ರ