ಅಬ್ಬಾ, ಹಾವೇರಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹವಾ ನೋಡಿ ಪೊಲೀಸರೇ ಶಾಕ್!

Updated on: Sep 19, 2025 | 10:00 AM

ಹಾವೇರಿ ಮಹಾಗಣಪತಿ ಕಾರ್ಯಕ್ರಮಕ್ಕೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸಿದ್ದು, ಕಾರ್ಯಕರ್ತರು ಹೂ ಮಳೆ ಸುರಿಸಿ, ಜೈಕಾರ ಕೂಗಿ ಸ್ವಾಗತಿಸಿದರು. ಯತ್ನಾಳ್​ಗೆ ಭರ್ಜರಿ ಸ್ವಾಗತ ದೊರೆತಿದ್ದನ್ನು ನೋಡಿ ಪೊಲೀಸರೇ ಒಂದು ಕ್ಷಣ ದಂಗಾದರು. ರಾಜ್ಯದ ಹಲವು ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಯತ್ನಾಳ್​ಗೆ ಇದೇ ರೀತಿಯ ಸ್ವಾಗತ ದೊರೆಯುತ್ತಿದೆ.

ಹಾವೇರಿ, ಸೆಪ್ಟೆಂಬರ್ 19: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಳೆದ ಕೆಲವು ದಿನಗಳಿಂದ ಬಹಳ ಚುರುಕಿನಿಂದ ರಾಜ್ಯ ಸಂಚಾರ ಮಾಡುತ್ತಿದ್ದಾರೆ. ಮಂಡ್ಯದ ಮದ್ದೂರಿಗೆ ತೆರಳಿ ಆಕ್ರಮಣಕಾರಿ ಮಾತುಗಳಿಂದ ಗಮನ ಸೆಳೆದಿದ್ದ ಅವರು ನಂತರ ತುಮಕೂರು ಸೇರಿ ವಿವಿಧ ಕಡೆ ಗಣೇಶೋತ್ಸವ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಅವರು ಹೋದಲ್ಲೆಲ್ಲ ಹಿಂದೂ ಕಾರ್ಯಕರ್ತರ ಪಡೆಯೇ ಸೇರುತ್ತಿದೆ. ಇದೀಗ ಅವರು ಹಾವೇರಿಯ ಗಣೇಶೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅವರಿಗೆ ದೊರೆತ ಸ್ವಾಗತ ನೋಡಿ ಪೊಲೀಸರೇ ಅಚ್ಚರಿಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ