ಬಸನಗೌಡ ಯತ್ನಾಳ್ ರೂ. 2,500 ಕೋಟಿ ಬಗ್ಗೆ ಉಲ್ಲೇಖಿಸಿದ್ದು ಕೇವಲ ಗಾಳಿಮಾತಲ್ಲ: ರವಿಕುಮಾರ್ ಗಾಣಿಗ
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಗಾಣಿಗ ಹಿಂದೆ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದಾಗ, ಬಿಜೆಪಿಯವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ತಲಾ ₹ 30 ಕೋಟಿ ನೀಡಿ ಖರೀದಿಸಿದರಲ್ಲದೆ, ಅವರ ಚುನಾವಣೆಗಾಗಿಯೂ 30 ಕೋಟಿ ಖರ್ಚು ಮಾಡಿದ್ದರು, ಅವರಲ್ಲಿ ಸಾಕಷ್ಟು ದುಡ್ಡಿದೆ ಎಂದು ಹೇಳಿದರು.
ಮಂಡ್ಯ: ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಪಕ್ಷದಲ್ಲಿ ಒಬ್ಬರು ಮುಖ್ಯಮಂತ್ರಿಯಾಗಲು ₹ 2,500 ಕೋಟಿ ತಯಾರಾಗಿಟ್ಟುಕೊಂಡು ಕೂತಿದ್ದಾರೆ, ಅವರು ಹೇಳಿದ್ದು ಯಾಕೆ ತನಿಖೆಯಾಗುತ್ತಿಲ್ಲ? ಬಿಜೆಪಿಯಲ್ಲಿ ಹಣದ ಕೊರತೆಯಿಲ್ಲ, ಅವರು ಯಾವತ್ತೂ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದವರಲ್ಲ, ಅಪರೇಶನ್ ಕಮಲ ನಡೆಸಿಯೇ ಅಧಿಕಾರ ಹಿಡಿದವರು, ಹೆಚ್ ಡಿ ದೇವೇಗೌಡ ಮತ್ತು ಯಡಿಯೂರಪ್ಪ ಸರ್ಕಾರ ಬೀಳಿಸ್ತೀವಿ ಅಂತ ಸುಮ್ಮನೆ ಹೇಳುತ್ತಿಲ್ಲ ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಾಣಿಗ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಾಸಕರಿಗೆ ₹ 50 ಕೋಟಿ ಆಫರ್ ವಿಷಯ ಸಿದ್ದರಾಮಯ್ಯ ಇದುವರೆಗೆ ಯಾಕೆ ಮುಚ್ಚಿಟ್ಟಿದ್ದರು? ಕುಮಾರಸ್ವಾಮಿ
Latest Videos