ಸಿದ್ದರಾಮಯ್ಯ ಸಮರ್ಥ ಆಡಳಿತ ನೀಡುತ್ತಿರುವುದು ಬಿಜೆಪಿ, ಜೆಡಿಎಸ್​ಗೆ ಸಹಿಸಲಾಗುತ್ತಿಲ್ಲ: ಪರಮೇಶ್ವರ್

ಸಿದ್ದರಾಮಯ್ಯ ಸಮರ್ಥ ಆಡಳಿತ ನೀಡುತ್ತಿರುವುದು ಬಿಜೆಪಿ, ಜೆಡಿಎಸ್​ಗೆ ಸಹಿಸಲಾಗುತ್ತಿಲ್ಲ: ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 18, 2024 | 11:20 AM

ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ನಿರಾಶಾದಾಯಕವಾಗಿ ಮಾತಾಡಿರುವುಕ್ಕೆ ಉತ್ತರಿಸಿದ ಪರಮೇಶ್ವರ್, ಕೆಲವು ಬೂತ್​ಗಳಲ್ಲಿ ಅವರ ಪರವಾಗಿ ವೋಟಿಂಗ್ ಆಗಿರಲ್ಲ, ಅದನ್ನು ಗಮನಿಸಿ ಅವರು ಹಾಗೆ ಹೇಳಿದ್ದಾರೆ, ಎಲ್ಲ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು.

ಮೈಸೂರು: ಸಿದ್ದರಾಮಯ್ಯ ಒಬ್ಬ ಸಮರ್ಥ ನಾಯಕ, ಹಿಂದೆ ಮುಖ್ಯಮಂತ್ರಿಯಾಗಿ 5-ವರ್ಷ ಉತ್ತಮ ಆಡಳಿತ ನೀಡಿದ್ದಾರೆ ಮತ್ತು ಈಗಲೂ ಸರ್ಕಾರವನ್ನು ಚೆನ್ನಾಗಿ ನಡೆಸುತ್ತಿದ್ದಾರೆ, ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಅವರ ಮೇಲೆ ಅಸಮಾಧಾನ ಹುಟ್ಟಿಕೊಂಡು ಅವರನ್ನು ಪದಚ್ಯುತಗೊಳಿಸುವ ಪ್ರಯತ್ನ ನಡೆಸಿದ್ದಾರೆ, ಅದೇ ಕಾರಣಕ್ಕೆ ಸಿದ್ದರಾಮಯ್ಯ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಿರುವ ಬಗ್ಗೆ ಮಾತಾಡಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ಕೋವಿಡ್ ಹಗರಣವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದರೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಂತಾಗುತ್ತದೆ: ಪರಮೇಶ್ವರ್