ಕೋವಿಡ್ ಹಗರಣವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದರೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಂತಾಗುತ್ತದೆ: ಪರಮೇಶ್ವರ್

ಕೋವಿಡ್ ಹಗರಣವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದರೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಂತಾಗುತ್ತದೆ: ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 16, 2024 | 1:04 PM

ಕೋವಿಡ್ ಸಮಯದಲ್ಲಿ ನಡೆದ ಅವ್ಯವಹಾರವನ್ನು ಸಂಸತ್ತಿಲ್ಲೂ ಪ್ರಸ್ತಾಪಿಸುವ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಹಗರಣದಲ್ಲಿ ಶಾಮೀಲಾಗಿರುವವರು ಈಗ ಸಂಸದರಾಗಿದ್ದಾರೆ, ಕೋವಿಡ್ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವು ನೀಡಿದೆ, ಹಾಗಾಗಿ ಸಂಸತ್ತಿನಲ್ಲಿ ಹಗರಣವನ್ನು ಪ್ರಸ್ತಾಪಿಸಿದರೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಂತಾಗುತ್ತದೆ ಎಂದರು.

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿಷಯದಲ್ಲಿ ಮಾಡಿದ ಕಾಮೆಂಟ್ ತಪ್ಪು ಅಂತ ಡಿಕೆ ಶಿವಕುಮಾರ್ ಈಗ ಹೇಳುವ ಬದಲು ಮೊದಲೇ ಕಡಿವಾಣ ಹಾಕಬಹುದಿತ್ತಲ ಅಂತ ಕೇಳಿದ್ದಕ್ಕೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್,  ಜಮೀರ್ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷರು ಯಾವ ದೃಷ್ಟಿಕೋನದಿಂದ ನೋಡಿದ್ದಾರೋ ಗೊತ್ತಿಲ್ಲ, ಇದು ಅವರಿಗೆ ಸಂಬಂಧಪಟ್ಟಿದ್ದು, ಅಧ್ಯಕ್ಷರೇ ಉತ್ತರಿಸುತ್ತಾರೆ ಎಂದು ಹೇಳಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕುಮಾರಸ್ವಾಮಿ ಹಳೆಯ ಸ್ನೇಹಿತ ಅಂತ ಜಮೀರ್ ಸ್ಪಷ್ಟನೆ ನೀಡಿದ್ದಾರೆ, ಇದು ಸಣ್ಣ ವಿಚಾರ: ಪರಮೇಶ್ವರ್

Published on: Nov 16, 2024 01:04 PM