ಕುಮಾರಸ್ವಾಮಿ ಹಳೆಯ ಸ್ನೇಹಿತ ಅಂತ ಜಮೀರ್ ಸ್ಪಷ್ಟನೆ ನೀಡಿದ್ದಾರೆ, ಇದು ಸಣ್ಣ ವಿಚಾರ: ಪರಮೇಶ್ವರ್

ಕುಮಾರಸ್ವಾಮಿ ಹಳೆಯ ಸ್ನೇಹಿತ ಅಂತ ಜಮೀರ್ ಸ್ಪಷ್ಟನೆ ನೀಡಿದ್ದಾರೆ, ಇದು ಸಣ್ಣ ವಿಚಾರ: ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 12, 2024 | 11:22 AM

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಿದ್ದರಾಮಯ್ಯರನ್ನು ಅಸಮರ್ಥ ಮುಖ್ಯಮಂತ್ರಿ ಮತ್ತು ಅಸಮರ್ಥ ಸರ್ಕಾರ ಎಂದು ಕರೆದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಅದು ಅವರ ಅನಿಸಿಕೆ ಮತ್ತು ಅಭಿಪ್ರಾಯ, ನಮ್ಮ ದೃಷ್ಟಿಯಲ್ಲಿ ಸಿದ್ದರಾಮಯ್ಯ ಸಮರ್ಥ ಮುಖ್ಯಮಂತ್ರಿ ಮತ್ತು ನಮ್ಮದು ಸಮರ್ಥ ಸರ್ಕಾರ ಎಂದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹಸಚಿವ ಜಿ ಪರಮೇಶ್ವರ್, ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಕಾಲಿಯ ಅಂತ ಕರೆದಿದ್ದು ಅವರ ವೈಯಕ್ತಿಕ ವಿಚಾರ, ನಾವಿಬ್ಬರು ಆಪ್ತ ಸ್ನೇಹಿತರು ಮತ್ತು ನಮ್ಮ ನಡುಬೆ ಆ ಮಟ್ಟಿನ ಸಲುಗೆಯಿದೆ, ಬೈದಾಡಿಕೊಳ್ಳುತ್ತೇವೆ ಅಂತ ಜಮೀರ್ ಅವರೇ ಸ್ಪಷ್ಟನೆ ನೀಡಿದ್ದಾರೆ, ಇವೆಲ್ಲ ಸಣ್ಣಪುಟ್ಟ ವಿಚಾರಗಳು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಜ್ಯಪಾಲರು ಜಮೀರ್ ಅಹ್ಮದ್ ವಿರುದ್ಧ ಏನು ಸೂಚನೆ ನೀಡಿದ್ದಾರೆ ಅಂತ ಗೊತ್ತಿಲ್ಲ: ಪರಮೇಶ್ವರ್