Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್ಸಿನಲ್ಲೇ ಸೆಲೆಬ್ರೇಷನ್... ಹೇಗಿತ್ತು ನೋಡಿ ಸಂಜು ಸ್ಯಾಮ್ಸನ್ ಹುಟ್ದಬ್ಬದ ಸಂಭ್ರಮ

ಬಸ್ಸಿನಲ್ಲೇ ಸೆಲೆಬ್ರೇಷನ್… ಹೇಗಿತ್ತು ನೋಡಿ ಸಂಜು ಸ್ಯಾಮ್ಸನ್ ಹುಟ್ದಬ್ಬದ ಸಂಭ್ರಮ

ಝಾಹಿರ್ ಯೂಸುಫ್
|

Updated on: Nov 12, 2024 | 12:54 PM

South Africa vs India: ಸೌತ್ ಆಫ್ರಿಕಾ ಮತ್ತು ಭಾರತ ನಡುವಣ ನಾಲ್ಕು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯವು ನಾಳೆ (ನ.13) ನಡೆಯಲಿದೆ. ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆದ್ದರೆ, 2ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಜಯ ಸಾಧಿಸಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 30ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಸ್ಯಾಮ್ಸನ್​ಗೆ ಟೀಮ್ ಇಂಡಿಯಾ ಆಟಗಾರರು ಬಿಗ್ ಸಪ್ರೈಸ್ ನೀಡಿದ್ದರು. ಅದು ಸಹ ಬಸ್ಸಿನಲ್ಲಿ ಎಂಬುದು ವಿಶೇಷ.

ಗೆಬಹಾದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಮುಗಿಸಿ ಟೀಮ್ ಇಂಡಿಯಾ ಸೆಂಚುರಿಯನ್​ಗೆ ತೆರಳಿತ್ತು. ಇದೇ ವೇಳೆ ಬಸ್​ನಲ್ಲಿ ಸಂಜು ಸ್ಯಾಮ್ಸನ್ ಅವರ ಹುಟ್ಟುಹಬ್ಬವನ್ನು ಟೀಮ್ ಇಂಡಿಯಾ ಆಟಗಾರರು ಆಚರಿಸಿಕೊಂಡಿದ್ದಾರೆ.

ಈ ಸಖತ್ ಸಂಭ್ರಮದ ವಿಡಿಯೋವನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ವಿಡಿಯೋ ಭಾರೀ ವೈರಲ್ ಆಗಿದೆ.
ಇನ್ನು ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯವು ನಾಳೆ (ನ.13) ನಡೆಯಲಿದೆ. ಸೆಂಚುರಿಯನ್​ನ ಸೂಪರ್​ ಸ್ಪೋರ್ಟ್ಸ್​ ಪಾರ್ಕ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ.

ಏಕೆಂದರೆ ನಾಲ್ಕು ಪಂದ್ಯಗಳ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವು ದಾಖಲಿಸಿದೆ. ಇದೀಗ ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಸೋಲನ್ನು ತಪ್ಪಿಸಿಕೊಳ್ಳಬಹುದು. ಹೀಗಾಗಿ ಬುಧವಾರ ಜರುಗಲಿರುವ 3ನೇ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.