ರಾಜ್ಯಪಾಲರು ಜಮೀರ್ ಅಹ್ಮದ್ ವಿರುದ್ಧ ಏನು ಸೂಚನೆ ನೀಡಿದ್ದಾರೆ ಅಂತ ಗೊತ್ತಿಲ್ಲ: ಪರಮೇಶ್ವರ್
ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಓಲೈಕೆಯ ರಾಜಕಾರಣ ಮಾಡಿಲ್ಲ, ಸಂವಿಧಾನದ ಆಶಯಗಳ ಪ್ರಕಾರ ಎಲ್ಲ ಧರ್ಮಗಳನ್ನು ಸಮಾನವಾಗಿ ಕಂಡಿದೆ, ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ತಾರತಮ್ಯವಿಲ್ಲ, ಎಲ್ಲ ಧರ್ಮಗಳ ಬಡಜನ ಯೋಜನೆಗಳ ಫಲಾನುಭವಿಗಳು ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ಮುಡಾ ಪ್ರಕರಣದಲ್ಲಿ ರಾಜ್ಯದ ಉಚ್ಚ ನ್ಯಾಯಾಲಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯಪಾಲರು ನೀಡಿರುವ ಸೂಚನೆಗೆ ಸೂಕ್ತ ಪ್ರತಿಕ್ರಿಯೆ ನೀಡದೆ ರಾಜ್ಯಪಾಲರು ಏನಂತ ಸೂಚನೆ ನೀಡಿದ್ದಾರೆ ತನಗೆ ಗೊತ್ತಿಲ್ಲ ಎಂದರು. ಇಕ್ಬಾಲ್ ಅಹ್ಮದ್ ಅನ್ಸಾರಿ ಹೇಳಿಕೆಗೆ ಪರಮೇಶ್ವರ್, ಅದು ಅವರ ವೈಯಕ್ತಿಕ ಹೇಳಿಕೆ, ಸರ್ಕಾರದ ಭಾಗವಾಗಿ ತಾನು ಪ್ರತಿಕ್ರಿಯಿಸಲಾಗದು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಕ್ಕಳ ಕೈಯಲ್ಲಿ ಪೆನ್ನಿನ ಬದಲು ತಲ್ವಾರ್ ಕೊಡಿ: ಮರುಳಾರಾಧ್ಯ ಶಿವಾಚಾರ್ಯ ಹೇಳಿಕೆ ಬಗ್ಗೆ ಪರಮೇಶ್ವರ್ ಹೇಳಿದ್ದಿಷ್ಟು