CN Ashwath Narayan: ಅಶ್ವಥ್ ನಾರಾಯಣ ಮಾತಾಡಿದ್ದು ತಪ್ಪು, ರಾಜಕಾರಣಿ ಅಂಥ ಭಾಷೆ ಬಳಸಕೂಡದು: ಬಸನಗೌಡ ಯತ್ನಾಳ್
ರಾಜಕೀಯದಲ್ಲಿ ಟೀಕೆ, ಖಂಡನೆ ಇದ್ದೇ ಇರುತ್ತದೆ, ಅದರೆ ಹೊಡೆದು ಹಾಕು, ಕೊಲ್ಲು ಮೊದಲಾದ ಪದಬಳಕೆ ಆಗಬಾರದು ಎಂದು ಹೇಳಿದರು. ಹಿಂಸೆಗೆ ಪ್ರಚೋದನೆ ನೀಡುವ ಮಾತುಗಳನ್ನು ಯಾವ ರಾಜಕಾರಣಿಯೂ ಆಡಬಾರದು ಎಂದು ಯತ್ನಾಳ್ ಹೇಳಿದರು.
ಬೆಂಗಳೂರು: ವಿವಾದಾತ್ಮಕ ಹೇಳಿಹೆ ನೀಡುವುದರಲ್ಲಿ ಸಿದ್ಧಹಸ್ತರೆನಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರೇ ತಮ್ಮ ಪಕ್ಷದ ಹಿರಿಯ ಸದಸ್ಯ ಮತ್ತು ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಟಿಪ್ಪು ಸುಲ್ತಾನನನ್ನು ಹೊಡೆದು ಹಾಕಿದ ಹಾಗೆ ಸಿದ್ದರಾಮಯ್ಯನವರನ್ನೂ (Siddaramaiah) ಹೊಡೆದು ಹಾಕಬೇಕೆಂದು ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿಧಾನ ಸೌಧದ ಹೊರಭಾಗದಲ್ಲಿ ಇಂದು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಯತ್ನಾಳ್, ರಾಜಕೀಯದಲ್ಲಿ ಟೀಕೆ, ಖಂಡನೆ ಇದ್ದೇ ಇರುತ್ತದೆ, ಅದರೆ ಹೊಡೆದು ಹಾಕು, ಕೊಲ್ಲು ಮೊದಲಾದ ಪದಬಳಕೆ ಆಗಬಾರದು ಎಂದು ಹೇಳಿದರು. ಹಿಂಸೆಗೆ ಪ್ರಚೋದನೆ ನೀಡುವ ಮಾತುಗಳನ್ನು ಯಾವ ರಾಜಕಾರಣಿಯೂ ಆಡಬಾರದು ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 16, 2023 01:26 PM