Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಪ್ಪುನಂತೆ ಖಡ್ಗ ಹಿಡಿದು ಟೋಪಿ ಧರಿಸಿದ್ದ ಬಸನಗೌಡ ಯತ್ನಾಳ್ ಒದರೋದನ್ನ ನಿಲ್ಲಿಸದಿದ್ರೆ ಈಶ್ವರಪ್ಪಗೆ ಆದ ಗತಿಯೇ ಆಗಲಿದೆ: ಕಾಶಪ್ಪನವರ್

ಟಿಪ್ಪುನಂತೆ ಖಡ್ಗ ಹಿಡಿದು ಟೋಪಿ ಧರಿಸಿದ್ದ ಬಸನಗೌಡ ಯತ್ನಾಳ್ ಒದರೋದನ್ನ ನಿಲ್ಲಿಸದಿದ್ರೆ ಈಶ್ವರಪ್ಪಗೆ ಆದ ಗತಿಯೇ ಆಗಲಿದೆ: ಕಾಶಪ್ಪನವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 24, 2024 | 12:13 PM

ಅಲ್ಪಸಂಖ್ಯಾತರನ್ನು ನಖಶಿಖಾಂತ ದ್ವೇಷಿಸುವ ಯತ್ನಾಳ್ ಹಿಂದೆ ತಾನು ಜೆಡಿಎಸ್ ಪಕ್ಷದಲ್ಲಿದ್ದಾಗ ತಲೆ ಮೇಲೆ ಟಿಪ್ಪು ಸುಲ್ತಾನ್ ಟೋಪಿ ಧರಿಸಿದ್ದ ಮತ್ತು ಕೈಯಲ್ಲಿ ಟಿಪ್ಪುನಂತ ಖಡ್ಗ ಹಿಡಿದಿದ್ದ. ದೇಶ ತನ್ನಪ್ಪನ ಆಸ್ತಿಯೇನೋ ಎಂಬಂತೆ ಮಾತಾಡುತ್ತಾನೆ ಎಂದು ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದರು.

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಹುನುಗುಂದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ (Samyukta Patil) ಪರ ಪ್ರಚಾರ ಮಾಡಿದ ಸ್ಥಳೀಯ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೇಳುವುದರ ಜೊತೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮೇಲೆ ತೀವ್ರ ವಾಗ್ದ್ದಾಳಿ ನಡೆಸಿದರು. ಗೊಡ್ಡೆಮ್ಮೆಗಳ ಹಾಗೆ ಒದರುವುದನ್ನೇ ಚಟ ಮಾಡಿಕೊಂಡಿರುವ ಯತ್ನಾಳ್ ಗೆ ಸಮುದಾಯ, ಜಾತಿ ಮತ್ತು ಪಕ್ಷದ ಬಗ್ಗೆ ಬದ್ಧತೆ ಇಲ್ಲ. ಹಾಲು ಮತದವರಿಗೆ, ಪಂಚಮಸಾಲಿಯವರಿಗೆ, ಅಲ್ಪಸಂಖ್ಯಾತರಿಗೆ-ಹೀಗೆ ಯಾರಿಗೂ ವೋಟು ಹಾಕಬಾರದು ಅಂತ ಹೇಳುತ್ತಾರೆ ಎಂದ ಕಾಶಪ್ಪನವರ್ ಪಂಚಮಸಾಲಿ ಸಮುದಾಯಕ್ಕೆ ಅವರ ಕೊಡುಗೆ ಏನೂ ಇಲ್ಲ, ಸಮುದಾಯ ಅವರು ಅನಿವಾರ್ಯ ಅಲ್ಲ ಎಂದರು. ಅಲ್ಪಸಂಖ್ಯಾತರನ್ನು ನಖಶಿಖಾಂತ ದ್ವೇಷಿಸುವ ಯತ್ನಾಳ್ ಹಿಂದೆ ತಾನು ಜೆಡಿಎಸ್ ಪಕ್ಷದಲ್ಲಿದ್ದಾಗ ತಲೆ ಮೇಲೆ ಟಿಪ್ಪು ಸುಲ್ತಾನ್ ಟೋಪಿ ಧರಿಸಿದ್ದ ಮತ್ತು ಕೈಯಲ್ಲಿ ಟಿಪ್ಪುನಂತ ಖಡ್ಗ ಹಿಡಿದಿದ್ದ. ದೇಶ ತನ್ನಪ್ಪನ ಆಸ್ತಿಯೇನೋ ಎಂಬಂತೆ ಮಾತಾಡುತ್ತಾನೆ ಎಂದು ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದರು. ಅವನು ಹೀಗೆ ಗೊಡ್ಡೆಮ್ಮಗಳ ರೀತಿ ಒದರುವುದನ್ನು ನಿಲ್ಲಿಸದಿದ್ದರೆ ಈಶ್ವರಪ್ಪನಿಗೆ ಆದ ಗತಿ ಅವನಿಗೂ ಆಗುತ್ತದೆ ಎಂದು ಕಾಶಪ್ಪನವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಅಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಕಾಂಗ್ರೆಸ್ ಪಕ್ಷಕ್ಕೆ ಬುಕ್ ಆಗಿರುವ ವಚನಾನಂದ ಸ್ವಾಮೀಜಿಗೆ ಬಿಜೆಪಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್