ನವೆಂಬರ್​ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಬೊಮ್ಮಾಯಿ ಹೇಳಿದ್ದಿಷ್ಟು

Updated By: ಗಂಗಾಧರ​ ಬ. ಸಾಬೋಜಿ

Updated on: Nov 12, 2025 | 8:26 PM

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರು ನವೆಂಬರ್‌ನಲ್ಲಿ ಕೆಳಗಿಳಿಯಲಿದ್ದಾರೆ ಎಂಬ ಮಾತನ್ನು ತಳ್ಳಿಹಾಕಿದ್ದಾರೆ. ಇದು ಕಾಂಗ್ರೆಸ್‌ನ ಭ್ರಮೆ ಎಂದು ಹೇಳಿರುವ ಬೊಮ್ಮಾಯಿ, ಬಿಜೆಪಿ ಒಂದು ಬಲಿಷ್ಠ ಹಾಗೂ ಸ್ಥಿರ ರಾಷ್ಟ್ರೀಯ ಪಕ್ಷ ಎಂದು ಪ್ರತಿಪಾದಿಸಿದ್ದಾರೆ.

ಚಿತ್ರದುರ್ಗ, ನವೆಂಬರ್​ 12: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಅವರು ನವೆಂಬರ್‌ನಲ್ಲಿ ಕೆಳಗಿಳಿಯಲಿದ್ದಾರೆ ಎಂಬ ವಿಚಾರ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಆ ರೀತಿ ಪ್ರಶ್ನೆಯೇ ಇಲ್ಲ. ಯಾರು ಹೇಳಿದ್ದು ನಿಮಗೆ? ಆಡಳಿತ ಪಕ್ಷದಲ್ಲೇ ಗೊಂದಲವಿದ್ದು ದಿನಕ್ಕೊಂದು ಹೇಳಿಕೆ ಬರುತ್ತಿವೆ. 2028ಕ್ಕೆ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬರುತ್ತದೆಂಬುದು ಅವರ ಭ್ರಮೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 12, 2025 08:21 PM