ಸತತ 8ನೇ ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಹೊರಟ್ಟಿ ಅಯ್ಕೆಯಾದ ಬಳಿಕ ಬೆಂಬಲಿಗರು ಸಂಭ್ರಮಿಸಿದರು
ಹೊರಟ್ಟಿ ಅವರು ಇತ್ತೀಚಿಗಷ್ಟೇ ದೇವೇಗೌಡರ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಪಕ್ಷ ಬದಲಾಯಿಸಿದ್ದು ಅವರಿಗೆ ಮಾರಕವಾಗಬಹುದು ಎಂದಿದ ರಾಜಕೀಯ ಲೆಕ್ಕಾಚಾರ ಉಲ್ಟಾ ಆಗಿದೆ.
Belagavi: ವಿಧಾನ ಪರಿಷತ್ (Legislative Council) ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ (BJP) ಬಸವರಾಜ ಹೊರಟ್ಟಿ (Basavaraj Horatti) ಅವರು ಸತತ 8ನೇ ಬಾರಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ. ಅನೇಕ ವರ್ಷಗಳ ಕಾಲ ಜೆಡಿ(ಎಸ್) ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಹೊರಟ್ಟಿ ಅವರು ಇತ್ತೀಚಿಗಷ್ಟೇ ದೇವೇಗೌಡರ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಪಕ್ಷ ಬದಲಾಯಿಸಿದ್ದು ಅವರಿಗೆ ಮಾರಕವಾಗಬಹುದು ಎಂದಿದ ರಾಜಕೀಯ ಲೆಕ್ಕಾಚಾರ ಉಲ್ಟಾ ಆಗಿದೆ. ಹೊರಟ್ಟಿ ಬೆಂಬಲಿಗರು ಬೆಳಗಾವಿಯಲ್ಲಿ ಅವರನ್ನು ಅಭಿನಂದಿಸಿ, ಸಿಹಿ ಹಂಚುತ್ತಾ ಪಟಾಕಿ ಸಿಡಿಸಿ ಮತ್ತು ಬಣ್ಣ ಎರಚಾಡಿ ಸಂಭ್ರಮಿಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos