ವಿಚಾರವಾದಿ ಸಿದ್ದರಾಮಯ್ಯ ಕೈಯಲ್ಲಿ ನಿಂಬೆಹಣ್ಣು ಮತ್ತು ಅದನ್ನು ಚಾಕ್ಯಚಕ್ಯತೆಯಿಂದ ಬೇರೆಯವರ ಕೈಗೆ ವರ್ಗಾಯಿಸಿದ್ದು ಕೂಡ ಕಾಣಿಸಿತು!

ವಿಚಾರವಾದಿ ಸಿದ್ದರಾಮಯ್ಯ ಕೈಯಲ್ಲಿ ನಿಂಬೆಹಣ್ಣು ಮತ್ತು ಅದನ್ನು ಚಾಕ್ಯಚಕ್ಯತೆಯಿಂದ ಬೇರೆಯವರ ಕೈಗೆ ವರ್ಗಾಯಿಸಿದ್ದು ಕೂಡ ಕಾಣಿಸಿತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 15, 2022 | 6:36 PM

ಅವರು ಶಾಲೆಯನ್ನು ನೋಡಿ ನಿಂಬೆಹಣ್ಣನ್ನು ಹಿಂಬಾಲಕನಿಗೆ ವರ್ಗಾಯಿಸಿದರೋ ಅಥವಾ ನಮ್ಮ ಕೆಮೆರಾಗಳನ್ನು ನೋಡಿ ಹಾಗೆ ಮಾಡಿದರೋ ಗೊತ್ತಾಗಿಲ್ಲ ಮಾರಾಯ್ರೇ.

ಶಿವಮೊಗ್ಗ:  ವಿಚಾರವಾದಿ (rationalist) ಮತ್ತು ಮೂಢನಂಬಿಕೆಗಳಿಂದ (superstitions) ಗಾವುದ ದೂರ ಇರುತ್ತೇನೆಂದು ಹೇಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಕೈಯಲ್ಲಿ ಮತ್ತೊಮ್ಮೆ ನಿಂಬೆಹಣ್ಣು ಪ್ರತ್ಯಕ್ಷವಾಗಿದೆ. ಶಿವಮೊಗ್ಗ ಜಿಲ್ಲೆ ಪ್ರವಾಸದಲ್ಲಿರುವ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೀರ್ಥಹಳ್ಳಿಗೆ ಹೋಗಿದ್ದರು. ಪಟ್ಟಣದ ಶಾಲೆಯೊಂದರ ಬಳಿ ಬಂದಾಗ ಅವರು ತಮ್ಮ ಕೈಯಲ್ಲಿದ್ದ ನಿಂಬೆಹಣ್ಣನ್ನು ಗಬಕ್ಕನೆ ತಮ್ಮ ಹಿಬಾಲಕರೊಬ್ಬರ ಕೈಗೆ ರವಾನಿಸುತ್ತಾರೆ. ಅವರು ಶಾಲೆಯನ್ನು ನೋಡಿ ನಿಂಬೆಹಣ್ಣನ್ನು ಹಿಂಬಾಲಕನಿಗೆ ವರ್ಗಾಯಿಸಿದರೋ ಅಥವಾ ನಮ್ಮ ಕೆಮೆರಾಗಳನ್ನು ನೋಡಿ ಹಾಗೆ ಮಾಡಿದರೋ ಗೊತ್ತಾಗಿಲ್ಲ ಮಾರಾಯ್ರೇ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.