ತುಕಾಲಿ ಸಂತೋಷ್​ ಔಟ್​ ಆದ ಬಳಿಕ ಟಾಪ್​ 5 ಸ್ಪರ್ಧಿಗಳಿಗೆ ಶುರುವಾಯ್ತು ಢವಢವ

|

Updated on: Jan 28, 2024 | 11:08 AM

ವಿನಯ್​ ಗೌಡ, ವರ್ತೂರು ಸಂತೋಷ್​, ಸಂಗೀತಾ ಶೃಂಗೇರಿ, ಕಾರ್ತಿಕ್​ ಮಹೇಶ್​ ಹಾಗೂ ಡ್ರೋನ್ ಪ್ರತಾಪ್​ ಅವರು ಫಿನಾಲೆಯಲ್ಲಿದ್ದಾರೆ. ಈ ಪೈಕಿ ಒಬ್ಬರಿಗೆ ಬಿಗ್​ ಬಾಸ್​ ಟ್ರೋಫಿ ಸಿಗಲಿದೆ. ಇಂದು (ಜ.28) ‘ಕರ್ಲಸ್​ ಕನ್ನಡ’ ವಾಹಿನಿ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಸಂಜೆ 7.30ಕ್ಕೆ ಬಿಗ್​ ಬಾಸ್​ ಫಿನಾಲೆ ಪ್ರಸಾರ ಆಗಲಿದೆ.

ಕಿಚ್ಚ ಸುದೀಪ್​ ಅವರ ಆಕರ್ಷಕ ನಿರೂಪಣೆಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ರಿಯಾಲಿಟಿ ಶೋನ ಗ್ರ್ಯಾಂಡ್​ ಫಿನಾಲೆ ನಡೆಯುತ್ತಿದೆ. ಶನಿವಾರ (ಜನವರಿ 27) ಫಿನಾಲೆಯ (BBK 10 Finale) ಮೊದಲ ಸಂಚಿಕೆ ಪ್ರಸಾರ ಆಗಿದೆ. ಇಂದು (ಜನವರಿ 28) ಅಂತಿಮ ಫಲಿತಾಂಶ ಹೊರಬೀಳಲಿದೆ. ಶನಿವಾರದ ಎಪಿಸೋಡ್​ನಲ್ಲಿ ತುಕಾಲಿ ಸಂತೋಷ್​ ಔಟ್​ ಆದರು. ಅವರ ಎಲಿಮಿನೇಷನ್​ ಬಳಿಕ ಉಳಿದಿರುವ ಟಾಪ್​ 5 ಸ್ಪರ್ಧಿಗಳಿಗೆ ಈಗ ಢವಢವ ಶುರುವಾಗಿದೆ. ವಿನಯ್​ ಗೌಡ (Vinay Gowda), ವರ್ತೂರು ಸಂತೋಷ್​, ಸಂಗೀತಾ ಶೃಂಗೇರಿ, ಕಾರ್ತಿಕ್​ ಮಹೇಶ್​ ಹಾಗೂ ಡ್ರೋನ್ ಪ್ರತಾಪ್​ ಅವರು ಫಿನಾಲೆಯಲ್ಲಿದ್ದಾರೆ. ಈ ಪೈಕಿ ಒಬ್ಬರಿಗೆ ಬಿಗ್​ ಬಾಸ್​ ಟ್ರೋಫಿ ಸಿಗಲಿದೆ. ‘ಕರ್ಲಸ್​ ಕನ್ನಡ’ ವಾಹಿನಿ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಸಂಜೆ 7.30ಕ್ಕೆ ಬಿಗ್​ ಬಾಸ್​ ಫಿನಾಲೆ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ