ನಿಯತ್ತಿನ ಮುಖವಾಡ ಹಾಕಿಕೊಂಡವರಿಗೆ ಈ ವಾರ ಕಿಚ್ಚನ ಕ್ಲಾಸ್​; ಸಜ್ಜಾಗಿದೆ ಪಂಚಾಯ್ತಿ ವೇದಿಕೆ

|

Updated on: Nov 11, 2023 | 3:38 PM

5ನೇ ವಾರದಲ್ಲಿ ಕೆಲವು ಸ್ಪರ್ಧಿಗಳ ಅಸಲಿ ಬಣ್ಣ ಬಯಲಾಗಿದೆ. ದೊಡ್ಮನೆಯಲ್ಲಿ ಡ್ರೋನ್​ ಪ್ರತಾಪ್​, ಮೈಕೆಲ್​ ಅವರ ಆಟದ ವೈಖರಿ ಬೇರೆ ಬೇರೆ ರೀತಿ ಆಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಲು ವಾರದ ಪಂಚಾಯ್ತಿ ವೇದಿಕೆ ಸಿದ್ಧವಾಗಿದೆ. ತಪ್ಪು ಮಾಡಿದವರಿಗೆ ಕ್ಲಾಸ್​ ತೆಗೆದುಕೊಳ್ಳಲು ಕಿಚ್ಚ ಸುದೀಪ್​ ಅವರು ರೆಡಿ ಆಗಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ರಿಯಾಲಿಟಿ ಶೋನಲ್ಲಿ 5ನೇ ವಾರ ಹಲವು ಟ್ವಿಸ್ಟ್​ಗಳು ಸಿಕ್ಕಿವೆ. ಕೆಲವರು ನಿಯತ್ತಾಗಿ ಆಟ ಆಡಿದ್ದಾರೆ. ಇನ್ನೂ ಕೆಲವರು ನಿಯತ್ತಿನ ಮುಖವಾಡ ಹಾಕಿಕೊಂಡಿದ್ದಾರೆ. ಈ ವಾರದಲ್ಲಿ ಕೆಲವು ಸ್ಪರ್ಧಿಗಳ ಅಸಲಿ ಬಣ್ಣ ಬಯಲಾಗಿದೆ. ಡ್ರೋನ್​ ಪ್ರತಾಪ್​, ಮೈಕೆಲ್​ (Michael Ajay) ಅವರ ಆಟದ ವೈಖರಿ ಬೇರೆ ಬೇರೆ ರೀತಿ ಆಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಲು ವಾರದ ಪಂಚಾಯ್ತಿ ವೇದಿಕೆ ಸಿದ್ಧವಾಗಿದೆ. ತಪ್ಪು ಮಾಡಿದವರಿಗೆ ಕ್ಲಾಸ್​ ತೆಗೆದುಕೊಳ್ಳಲು ಕಿಚ್ಚ ಸುದೀಪ್​ (Kichcha Sudeep) ಅವರು ರೆಡಿ ಆಗಿದ್ದಾರೆ. ಇದರ ಝಲಕ್​ ತೋರಿಸುವ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಸಂಚಿಕೆ ನ.11ರ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿದ್ದು, ಜಿಯೋ ಸಿನಿಮಾದಲ್ಲಿ 24 ಗಂಟೆಯೂ ಲೈವ್​ ನೋಡಬಹುದಾಗಿದೆ. ಈ ವಾರ ನಾಮಿನೇಟ್​ ಆದವರ ಪೈಕಿ ಶನಿವಾರ ಯಾರು ಸೇವ್​ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 11, 2023 03:38 PM