ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?

| Updated By: ಮದನ್​ ಕುಮಾರ್​

Updated on: Jan 20, 2025 | 9:36 PM

ನಟಿ ಮೋಕ್ಷಿತಾ ಪೈ ಅವರ ಒಂದು ಹಳೇ ಕೇಸ್​ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗಿದೆ. ಆ ಬಗ್ಗೆ ಗೌತಮಿ ಜಾದವ್ ಅವರು ಮಾತನಾಡಿದ್ದಾರೆ. ಕಳೆದ ಶನಿವಾರ (ಜನವರಿ 18) ಗೌತಮಿ ಅವರು ಬಿಗ್ ಬಾಸ್ ಆಟದಿಂದ ಔಟ್ ಆದರು. ಎಲಿಮಿನೇಷನ್​ ನಂತರ ‘ಟಿವಿ9’ಗೆ ಅವರು ಸಂದರ್ಶನ ನೀಡಿದ್ದಾರೆ.

ಬಿಗ್ ಬಾಸ್​ಗೆ ಬರುವುದಕ್ಕೂ ಮುನ್ನ ಗೌತಮಿ ಜಾದವ್ ಹಾಗೂ ಮೋಕ್ಷಿತಾ ಪೈ ಅವರು ಪರಿಚಿತರಾಗಿದ್ದರು. ಆದರೆ ಮೋಕ್ಷಿತಾ ಬಗೆಗಿನ ಎಲ್ಲ ವಿಚಾರಗಳು ಗೌತಮಿಗೆ ತಿಳಿದಿರಲಿಲ್ಲ. ‘ನನಗೆ ಆ ಕೇಸ್ ಬಗ್ಗೆ ಗೊತ್ತಿಲ್ಲ. ಆ ಕುರಿತು ಕೇಳಿದಾಗ ಆಶ್ಚರ್ಯ ಆಯಿತು. ಅವರ ಹೆಸರು ಕೂಡ ಬೇರೆ ಇತ್ತು ಎಂಬುದು ತಿಳಿದಾಗಲೂ ಆಶ್ಚರ್ಯ ಆಯಿತು. ಈಗ ಅವರು ಹೊರಗೆ ಬಂದ ನಂತರ ಎಲ್ಲವೂ ಗೊತ್ತಾಗುತ್ತದೆ’ ಎಂದು ಗೌತಮಿ ಜಾವದ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.