ಗಿಲ್ಲಿಯನ್ನು ಬಳಸಿಕೊಂಡು ಅವನಿಗೆ ಉಲ್ಟಾ ಹೊಡೆಯೋದು ತಪ್ಪು: ಕಾವ್ಯಾ ಬಗ್ಗೆ ರಿಷಾ ಖಡಕ್ ಮಾತು

Edited By:

Updated on: Nov 24, 2025 | 8:33 PM

‘ಬಿಗ್ ಬಾಸ್ ಕನ್ನಡ 12’ ರಿಯಾಲಿಟಿ ಶೋನಿಂದ ರಿಷಾ ಎಲಿಮಿನೇಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಹೋಗಿದ್ದ ಅವರ ಆಟ ಇಲ್ಲಿದೆ ಮುಕ್ತಾಯ ಆಗಿದೆ. ಟಿವಿ9 ಜತೆ ಮಾತಾಡಿದ ಅವರು ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕಾವ್ಯಾ ಮತ್ತು ಗಿಲ್ಲಿ ಬಗ್ಗೆ ಅವರು ಮಾತನಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಿಂದ ರಿಷಾ (Risha) ಅವರು ಎಲಿಮಿನೇಟ್ ಆಗಿದ್ದಾರೆ. ಟಿವಿ9 ಜೊತೆ ಮಾತನಾಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ರಿಷಾ ಹಂಚಿಕೊಂಡಿದ್ದಾರೆ. ಕಾವ್ಯಾ ಮತ್ತು ಗಿಲ್ಲಿ (Gilli Nata) ಬಗ್ಗೆ ಅವರು ಮಾತನಾಡಿದ್ದಾರೆ. ‘ಕಾವ್ಯ ಚಾಲಾಕಿ. ಅದು ಸಾಬೀತಾಗಿದೆ. ಗಿಲ್ಲಿ ನನ್ನ ಜೊತೆ ಕ್ಲೋಸ್ ಆಗಬೇಕಾದರೆ ಅವನನ್ನು ಸೈಡಿಗೆ ಕರೆದುಕೊಂಡು ಹೋಗಿ ರಿಷಾ ಜೊತೆ ಯಾಕೆ ಕ್ಲೋಸ್ ಆಗುತ್ತಿದ್ದೀಯಾ ಅಂತ ಅವನಿಗೆ ಕೇಳಿದಳು. ಅದೇ ಚಾಲಾಕಿತನ. ಗಿಲ್ಲಿ ಜೊತೆ ನಾನು ಇದ್ದರೆ ಹೈಲೈಟ್ ಆಗುತ್ತೇನೆ ಎಂಬುದು ಅವಳಿಗೆ ಗೊತ್ತಿದೆ. ಗಿಲ್ಲಿಯನ್ನು ಬಿಟ್ಟು ಆಡಿದರೆ ಕಾವ್ಯ ಝೀರೋ. ಅದು ಅವಳಿಗೂ ಗೊತ್ತು. ಗಿಲ್ಲಿ ಯಾರ ಕೈ ಬಿಡುತ್ತಾನೋ ಅವರ ಆಟ ಮುಗಿಯುತ್ತೆ. ಅವನ ಲಕ್ ಕೂಡ ಚೆನ್ನಾಗಿದೆ. ಅವನಿಗೆ ಉಲ್ಟಾ ಹೊಡೆಯೋದು ತಪ್ಪು. ಕಾವ್ಯ (Kavya Shaiva) ಎಲ್ಲೋ ಅದನ್ನು ಮಾಡುತ್ತಿದ್ದಾಳೆ ಅಂತ ನನಗೆ ಅನಿಸಿತು. ಗಿಲ್ಲಿಯನ್ನು ಬೇರೆ ಹುಡುಗಿಯರ ಜೊತೆ ಕ್ಲೋಸ್ ಆಗಲು ಕಾವ್ಯ ಬಿಡಲಿಲ್ಲ. ಕಾವ್ಯಗೆ ಗೆಲ್ಲುವ ಅರ್ಹತೆ ಇಲ್ಲ. ಟಾಸ್ಕ್​​ನಲ್ಲೂ ಆಕೆ ಸಮರ್ಥಳಲ್ಲ’ ಎಂದು ರಿಷಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.