ಧರ್ಮಧ್ವಜ ಸ್ಥಾಪನೆಗೆ ಅಯೋಧ್ಯೆಯ ರಾಮಮಂದಿರ ಸಜ್ಜು
ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮ ಮಂದಿರದ ಮೇಲ್ಭಾಗದಲ್ಲಿ ಕೇಸರಿ ಧ್ವಜ ಹಾರಿಸಲಿದ್ದಾರೆ. ಇದು ದೇವಾಲಯದ ನಿರ್ಮಾಣ ಪೂರ್ಣಗೊಂಡ ಸಂಕೇತವಾಗಿದೆ. ಈ ಮಹೋತ್ಸವವನ್ನು ವೀಕ್ಷಿಸಲು ದೇಶಾದ್ಯಂತ ವಿವಿಧ ಮೂಲೆಗಳಿಂದ ಜನರು ಅಯೋಧ್ಯೆಗೆ ಬಂದಿದ್ದಾರೆ. ನಗರ ಮತ್ತು ದೇವಾಲಯವನ್ನು 100 ಕೆಜಿ ಹೂವುಗಳಿಂದ ಅಲಂಕರಿಸಲಾಗಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಧ್ವಜಾರೋಹಣ ಮಾಡಲಿದ್ದಾರೆ. ಅದಕ್ಕೂ ಮೊದಲು, ಅವರು ಬೆಳಿಗ್ಗೆ 10 ಗಂಟೆಗೆ ಸಪ್ತಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಈ ಸಪ್ತಮಂದಿರವು ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ದೇವಿ ಅಹಲ್ಯ, ನಿಷಾದರಾಜ ಗುಹ ಮತ್ತು ಮಾತಾ ಶಬರಿಗೆ ಸಂಬಂಧಿಸಿದ ದೇವಾಲಯಗಳನ್ನು ಹೊಂದಿದೆ.
ಅಯೋಧ್ಯೆ, ನವೆಂಬರ್ 24: ನಾಳೆ ನಡೆಯಲಿರುವ ಭವ್ಯ ‘ಧರ್ಮಧ್ವಜ’ ಸಮಾರಂಭಕ್ಕೆ ಅಯೋಧ್ಯೆಯ ರಾಮ ಮಂದಿರ ಸಜ್ಜಾಗಿದೆ. ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮ ಮಂದಿರದ ಮೇಲ್ಭಾಗದಲ್ಲಿ ಕೇಸರಿ ಧ್ವಜ ಹಾರಿಸಲಿದ್ದಾರೆ. ಇದು ದೇವಾಲಯದ ನಿರ್ಮಾಣ ಪೂರ್ಣಗೊಂಡ ಸಂಕೇತವಾಗಿದೆ. ಈ ಮಹೋತ್ಸವವನ್ನು ವೀಕ್ಷಿಸಲು ದೇಶಾದ್ಯಂತ ವಿವಿಧ ಮೂಲೆಗಳಿಂದ ಜನರು ಅಯೋಧ್ಯೆಗೆ ಬಂದಿದ್ದಾರೆ. ನಗರ ಮತ್ತು ದೇವಾಲಯವನ್ನು 100 ಕೆಜಿ ಹೂವುಗಳಿಂದ ಅಲಂಕರಿಸಲಾಗಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಧ್ವಜಾರೋಹಣ ಮಾಡಲಿದ್ದಾರೆ. ಅದಕ್ಕೂ ಮೊದಲು, ಅವರು ಬೆಳಿಗ್ಗೆ 10 ಗಂಟೆಗೆ ಸಪ್ತಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಈ ಸಪ್ತಮಂದಿರವು ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ದೇವಿ ಅಹಲ್ಯ, ನಿಷಾದರಾಜ ಗುಹ ಮತ್ತು ಮಾತಾ ಶಬರಿಗೆ ಸಂಬಂಧಿಸಿದ ದೇವಾಲಯಗಳನ್ನು ಹೊಂದಿದೆ.
ಒಂದು ಗಂಟೆಯ ನಂತರ, ಪ್ರಧಾನಿ ಮೋದಿ ಮಾತಾ ಅನ್ನಪೂರ್ಣ ಮಂದಿರಕ್ಕೂ ಭೇಟಿ ನೀಡಲಿದ್ದಾರೆ ಮತ್ತು ರಾಮ ದರ್ಬಾರ್ ಗರ್ಭಗೃಹದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಬಳಿಕ ಅವರು ಭಗವಾನ್ ರಾಮನ ವಿಗ್ರಹಕ್ಕೂ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ, ಅವರು ರಾಮಮಂದಿರದ ಮೇಲ್ಭಾಗದಲ್ಲಿ ತ್ರಿಕೋನ ಆಕಾರದ ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ. ಇದನ್ನು ಧರ್ಮಧ್ವಜ ಎನ್ನಲಾಗುತ್ತದೆ. ಧ್ವಜಾರೋಹಣವು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

