ಬೆಂಗಳೂರಿನ ಮುನ್ನೇನಕೊಳಲು ಏರಿಯಾದಲ್ಲಿ ಬಿ ಬಿ ಎಮ್ ಪಿ ಸಿಬ್ಬಂದಿಯಿಂದ ಭರ್ಜರಿ ಒತ್ತುವರಿ ತೆರವು ಕಾರ್ಯಾಚರಣೆ
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಸಂಕಷ್ಟಗೊಳಗಾದ ಪ್ರದೇಶಗಳಲ್ಲಿ ಮುನ್ನೇನಕೊಳಲು ಕೂಡ ಒಂದು. ಇಲ್ಲಿ ಅವ್ಯಾಹತವಾಗಿ ಸರ್ಕಾರಿ ಜಾಗ, ರಾಜಾ ಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ಮತ್ತು ಸಿಬ್ಬಂದಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು (demolition drive) ಸೋಮವಾರದಿಂದ ಆರಂಭಿಸಿದ್ದು ಅದಿಂದು ಎರಡನೇ ದಿನಕ್ಕೆ ಕಾಲಿಟ್ಟಿದೆ ಮಾರಾಯ್ರೇ. ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಸಂಕಷ್ಟಗೊಳಗಾದ ಪ್ರದೇಶಗಳಲ್ಲಿ ಮುನ್ನೇನಕೊಳಲು (Munnenakolalu) ಕೂಡ ಒಂದು. ಇಲ್ಲಿ ಅವ್ಯಾಹತವಾಗಿ ಸರ್ಕಾರಿ ಜಾಗ, ರಾಜಾ ಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು ಬಿಬಿಎಮ್ ಪಿ ಅಧಿಕಾರಿಗಳು ಬುಲ್ಡೋಜರ್ ಮೂಲಕ ತೆರವು ಕಾರ್ಯದಲ್ಲಿ ನಿರತವಾಗಿರುವುದನ್ನು ನೀವಿಲ್ಲಿ ನೋಡಬಹುದು.