ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಬಿ ಬಿ ಎಮ್ ಪಿ ಸ್ಥಿತಿವಂತರ ಬಗ್ಗೆ ಮೃದು ಧೋರಣೆ ತಳೆದಿದೆ ಅನ್ನುತ್ತಾರೆ ಸಾರ್ವಜನಿಕರು
ಬಾಗಮನೆ ಸಂಸ್ಥೆಯ ಕಟ್ಟಡದ ಹತ್ತಿರಕ್ಕೂ ಬಿ ಬಿ ಎಮ್ ಪಿ ಸಿಬ್ಬಂದಿ ಹೋಗದ ದೃಶ್ಯವನ್ನು ನಾವು ಟಿವಿಗಳಲ್ಲಿ ನೋಡುತ್ತಿದ್ದೇವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಡೆಸುತ್ತಿರುವ ಒತ್ತುವರಿ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ತಾರತಮ್ಯ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಬಡವರ ಮನೆಗಳನ್ನು ಯಾವುದೇ ನೋಟೀಸ್ (notice) ಇಲ್ಲದೆ ಒಡೆಯಲಾಗುತ್ತಿದೆ, ನಮ್ಮ ಮನೆಗಳನ್ನು ಒಡೆದರೆ ಮಾತ್ರ ನೀರು ಸರಾಗವಾಗಿ ಹರಿದು ಹೋಗುತ್ತಾ ಅಂತ ಅವರು ಪ್ರಶ್ನಿಸುತ್ತಿದ್ದಾರೆ. ಉಳ್ಳವರ ಮತ್ತು ಸ್ಥಿತಿವಂತರ (rich people) ಮಾಡಿಕೊಂಡಿರುವ ಒತ್ತುವರಿ ತೆರವು ಮಾಡುವ ಪ್ರಯತ್ನ ನಡೆಯುತ್ತಿಲ್ಲ. ಬಾಗಮನೆ ಸಂಸ್ಥೆಯ ಕಟ್ಟಡದ ಹತ್ತಿರಕ್ಕೂ ಬಿ ಬಿ ಎಮ್ ಪಿ ಸಿಬ್ಬಂದಿ ಹೋಗದ ದೃಶ್ಯವನ್ನು ನಾವು ಟಿವಿಗಳಲ್ಲಿ ನೋಡುತ್ತಿದ್ದೇವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
Latest Videos