ಬೆಟ್ಟೇನ ಅಗ್ರಹಾರ ಬಡಾವಣೆಯಲ್ಲಿ ಕೆರೆ ಜಾಗ ಒತ್ತುವರಿ ಮಾಡಿ ನಿರ್ಮಿಸಿದ್ದ ಚರ್ಚ್ ನೆಲಸಮ

ಬೆಟ್ಟೇನ ಅಗ್ರಹಾರ ಬಡಾವಣೆಯಲ್ಲಿ ಕೆರೆ ಜಾಗ ಒತ್ತುವರಿ ಮಾಡಿ ನಿರ್ಮಿಸಿದ್ದ ಚರ್ಚ್ ನೆಲಸಮ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 14, 2022 | 12:08 PM

ಸ್ಥಳೀಯರು ಚರ್ಚ್ ಒಡೆದು ಹಾಕಿರುವ ಬಗ್ಗೆ ದೂರುತ್ತಿಲ್ಲವಾದರೂ, ಕೆರೆಯನ್ನು ಹಾಳಾಗಲು ಬಿಟ್ಟಿದ್ದಕ್ಕೆ ಸಂಬಂಧಪಟ್ಟ ಇಲಾಖೆಗಳನ್ನು ದೂಷಿಸುತ್ತಿದ್ದಾರೆ.

ಬೆಂಗಳೂರು: ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬೆಂಗಳೂರು ಮಹಾನಗರ ಪಾಲಿಕೆ (BBMP) ಆರಂಭಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೆಟ್ಟೇನ ಅಗ್ರಹಾರ ಬಡಾವಣೆಯಲ್ಲಿ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಚರ್ಚ್ (church) ಒಂದನ್ನು ಬುಧವಾರ ಬೆಳಗ್ಗೆ ನೆಲಸಮಗೊಳಿಸಲಾಗಿದೆ (demolished). ಸ್ಥಳೀಯರು ಚರ್ಚ್ ಒಡೆದು ಹಾಕಿರುವ ಬಗ್ಗೆ ದೂರುತ್ತಿಲ್ಲವಾದರೂ, ಕೆರೆಯನ್ನು ಹಾಳಾಗಲು ಬಿಟ್ಟಿದ್ದಕ್ಕೆ ಸಂಬಂಧಪಟ್ಟ ಇಲಾಖೆಗಳನ್ನು ದೂಷಿಸುತ್ತಿದ್ದಾರೆ.