Suhasini Maniratnam: ‘ಮದ್ವೆ ಆದ್ಮೇಲೆ ಹೆಚ್ಚು ಕನ್ನಡ ಚಿತ್ರ ಮಾಡಿದೆ, ಅಚ್ಯುತ್​ ಅದ್ಭುತ ನಟ’: ಸುಹಾಸಿನಿ ಮಣಿರತ್ನಂ

Monsoon Raaga: ಸೆ.16ರಂದು ‘ಮಾನ್ಸೂನ್​ ರಾಗ’ ಸಿನಿಮಾ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ಸುಹಾಸಿನಿ ಮಣಿರತ್ನಂ ಮತ್ತು ಅಚ್ಯುತ್​ ಕಮಾರ್​ ಅವರು ಜೋಡಿಯಾಗಿ ನಟಿಸಿದ್ದಾರೆ.

TV9kannada Web Team

| Edited By: Madan Kumar

Sep 14, 2022 | 2:46 PM

ನಟಿ ಸುಹಾನಿಸಿ ಮಣಿರತ್ನಂ (Suhasini Maniratnam) ಅವರು ಬಹುಭಾಷೆಯಲ್ಲಿ ಫೇಮಸ್​. ಅವರಿಗೆ ಹೆಚ್ಚು ಕನ್ನಡ ಸಿನಿಮಾಗಳನ್ನು ಮಾಡಲು ಸಾಧ್ಯವಾಗಿದ್ದೇ ಮದುವೆ ಆದ ನಂತರ. ಈ ಬಗ್ಗೆ ಅವರು ‘ಮಾನ್ಸೂನ್​ ರಾಗ’ (Monsoon Raaga) ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಮಾತನಾಡಿದ್ದಾರೆ. ಈ ಸಿನಿಮಾ ಸೆ.16ರಂದು ಬಿಡುಗಡೆ ಆಗಲಿದೆ. ಡಾಲಿ ಧನಂಜಯ್​, ರಚಿತಾ ರಾಮ್​, ಯಶಾ ಶಿವಕುಮಾರ್​ ಮಾತ್ರವಲ್ಲದೇ ಅಚ್ಯುತ್​ ಕುಮಾರ್​ (Achyuth Kumar) ಅವರು ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ನಟನೆಯನ್ನು ಅದ್ಭುತ ಎಂದು ಸುಹಾನಿಸಿ ಹೊಗಳಿದ್ದಾರೆ. ಈ ಸಿನಿಮಾಗೆ ರವೀಂದ್ರನಾಥ್​ ನಿರ್ದೇಶನ ಮಾಡಿದ್ದು, ವಿಖ್ಯಾತ್​ ಬಂಡವಾಳ ಹೂಡಿದ್ದಾರೆ.

 

Follow us on

Click on your DTH Provider to Add TV9 Kannada