ಪ್ರಧಾನಿ ನರೇಂದ್ರ ಮೋದಿ ಬರುವ ಮೊದಲು ರಿಪೇರಿ ಕಂಡು ಎರಡು ದಿನ ಬಾಳಿದ ಈ ರಸ್ತೆಗೆ ಒಂದು ಹೆಸರು ಸೂಚಿಸಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 23, 2022 | 6:15 PM

ಅವರು ನಗರಕ್ಕೆ ಅಗಮಿಸುವ ಮೊದಲು ಮರಿಯಪ್ಪನ ಪಾಳ್ಯದಿಂದ ಬೆಂಗಳೂರು ವಿಶ್ವವಿದ್ಯಾಲಯದ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ರಿಪೇರಿ ಮಾಡಿ ಹೊಸದಾಗಿ ಡಾಂಬರೀಕರಣ ಮಾಡಲಾಗಿತ್ತು. ಬೆಳಗ್ಗೆ ದುರಸ್ತಿಯಾದ ರಸ್ತೆ ಸಾಯಂಕಾಲ ಅಗುವಷ್ಟರಲ್ಲಿ ಕಿತ್ತು ಬರಲಾರಂಭಿಸಿದಾಗ ಅದನ್ನು ಮತ್ತೊಮ್ಮೆ ಡಾಂಬರೀಕರಣ ಮಾಡಲಾಯಿತು.

ಬೆಂಗಳೂರಿನ ಇನ್ಫ್ರಾಸ್ಟ್ರಕ್ಚರ್, ರಸ್ತೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಹೊಗಳಿರಬಹುದು! ಆದರೆ ಅಸಲೀಯತ್ತು ಗೊತ್ತಾದರೆ ಅವರು ಬಸವರಾಜ ಬೊಮ್ಮಾಯಿ (Basavaraj Bommai) ಅವರ ಇಡೀ ಸಚಿವ ಸಂಪುಟವನ್ನು ದೆಹಲಿಗೆ ಕರೆಸಿ ಉಗಿಯುತ್ತಾರೆ. ಅವರು ನಗರಕ್ಕೆ ಅಗಮಿಸುವ ಮೊದಲು ಮರಿಯಪ್ಪನ ಪಾಳ್ಯದಿಂದ ಬೆಂಗಳೂರು ವಿಶ್ವವಿದ್ಯಾಲಯದ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ರಿಪೇರಿ ಮಾಡಿ ಹೊಸದಾಗಿ ಡಾಂಬರೀಕರಣ (asphalted) ಮಾಡಲಾಗಿತ್ತು. ಬೆಳಗ್ಗೆ ದುರಸ್ತಿಯಾದ ರಸ್ತೆ ಸಾಯಂಕಾಲ ಅಗುವಷ್ಟರಲ್ಲಿ ಕಿತ್ತು ಬರಲಾರಂಭಿಸಿದಾಗ ಅದನ್ನು ಮತ್ತೊಮ್ಮೆ ಡಾಂಬರೀಕರಣ ಮಾಡಲಾಯಿತು. ಎರಡನೇ ಸಲ ಡಾಂಬರೀಕರಣಗೊಂಡ ರಸ್ತೆ ಹೇಗಿದೆ ಅಂತ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ವಿವರಿಸುತ್ತಿದ್ದಾರೆ; ಕೇಳಿಸಿಕೊಳ್ಳಿ ಮತ್ತು ರಸ್ತೆಯನ್ನು ನೋಡಿ!

ಇದನ್ನೂ ಓದಿ:   ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದಲ್ಲಿ ಅರ್ಧ ಮೊಟ್ಟೆ ನೀಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್