ಕೊರೊನಾ ಅರಿವು ಮೂಡಿಸಲು ಸೆಲೆಬ್ರಿಟಿಗಳ ಮೊರೆ ಹೋದ BBMP
[lazy-load-videos-and-sticky-control id=”agDSFGiy1us”] ಬೆಂಗಳೂರು: ಕೊರೊನಾ ಸೋಂಕು ಇಡೀ ವಿಶ್ವಕ್ಕೆ ಹಬ್ಬಿದೆ. ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ. ಲಾಕ್ಡೌನ್, ಸೀಲ್ಡೌನ್ ಅಸ್ತ್ರಗಳು ಕೊರೊನಾ ಮೇಲೆ ಪರಿಣಾಮ ಬೀರುತ್ತಿಲ್ಲ. ಜನರು ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಹೀಗಾಗಿ ಜನರಲ್ಲಿ ಕೊರೊನಾ ಬಗ್ಗೆ ಅರಿವು ಮೂಡಿಸಲು BBMP ಹೊಸ ಪ್ಲಾನ್ ಮಾಡಿದೆ. BBMP ಇದೀಗ ಸೆಲೆಬ್ರಿಟಿಗಳ ಮೊರೆ ಹೋಗಿದೆ. ನಟ-ನಟಿಯರಿಂದ ಅರಿವು ಮೂಡಿಸಲು BBMP ಮುಂದಾಗಿದೆ. ಸಾರ್ವಜನಿಕರಿಗೆ ವೈರಸ್ ಬಗ್ಗೆ ಅರಿವು ಮೂಡಿಸಲು ರಾಯಭಾರಿಯಾಗಿ ಪುನೀತ್ ರಾಜ್ […]

[lazy-load-videos-and-sticky-control id=”agDSFGiy1us”] ಬೆಂಗಳೂರು: ಕೊರೊನಾ ಸೋಂಕು ಇಡೀ ವಿಶ್ವಕ್ಕೆ ಹಬ್ಬಿದೆ. ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ. ಲಾಕ್ಡೌನ್, ಸೀಲ್ಡೌನ್ ಅಸ್ತ್ರಗಳು ಕೊರೊನಾ ಮೇಲೆ ಪರಿಣಾಮ ಬೀರುತ್ತಿಲ್ಲ. ಜನರು ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಹೀಗಾಗಿ ಜನರಲ್ಲಿ ಕೊರೊನಾ ಬಗ್ಗೆ ಅರಿವು ಮೂಡಿಸಲು BBMP ಹೊಸ ಪ್ಲಾನ್ ಮಾಡಿದೆ.
BBMP ಇದೀಗ ಸೆಲೆಬ್ರಿಟಿಗಳ ಮೊರೆ ಹೋಗಿದೆ. ನಟ-ನಟಿಯರಿಂದ ಅರಿವು ಮೂಡಿಸಲು BBMP ಮುಂದಾಗಿದೆ. ಸಾರ್ವಜನಿಕರಿಗೆ ವೈರಸ್ ಬಗ್ಗೆ ಅರಿವು ಮೂಡಿಸಲು ರಾಯಭಾರಿಯಾಗಿ ಪುನೀತ್ ರಾಜ್ ಕುಮಾರ್, ಸುದೀಪ್, ರಚಿತಾರಾಮ್ ನೇಮಿಸಲು ಬಿಬಿಎಂಪಿ ಚಿಂತಿಸುತ್ತಿದೆ. ಸೆಲೆಬ್ರಿಟಿಗಳಿಂದ ನಗರದಲ್ಲಿ ವೈರಸ್ ಬಗ್ಗೆ ಜಾಗ್ರತೆ ಕಾರ್ಯಕ್ರಮ ನಡೆಸಿದರೆ ಜನ ವೈರಸ್ ವಿರುದ್ಧ ಹೋರಾಡಲು ಹೆಚ್ಚಿನ ಗಮನವಹಿಸುತ್ತಾರೆ ಎನ್ನಲಾಗುತ್ತಿದೆ.
ಕೊರೊನಾ ಜಾಗೃತಿಗೆ ರಾಯಭಾರಿಯಾದ ನಟ ರಮೇಶ್
ಬಿಬಿಎಂಪಿ ನಟ ರಮೇಶ್ ಅರವಿಂದ್ರನ್ನ ರಾಯಭಾರಿಯಾಗಿ ನೇಮಕ ಮಾಡಿದೆ.
Published On - 12:44 pm, Mon, 20 July 20




