[lazy-load-videos-and-sticky-control id=”NkYvtTYOyxo”]
ಬೆಂಗಳೂರು: ಕೊವಿಡ್ನಿಂದ ಮೃತಪಟ್ಟವರ ಶವಸಂಸ್ಕಾರದ ವೇಳೆಯೂ ಚಿತಾಗಾರದಲ್ಲಿ ವಸೂಲಿ ದಂಧೆ ನಡೀತಿತ್ತು ಎಂಬುದರ ಮೇಲೆ ರಹಸ್ಯ ಕಾರ್ಯಾಚರಣೆ ಮೂಲಕ ಟಿವಿ9 ಬಯಲು ಮಾಡಿತ್ತು. ರಣಹದ್ದುಗಳು ಅನ್ನೋ ಶೀರ್ಷಿಕೆ ಅಡಿಯಲ್ಲಿ ದಂಧೆಯನ್ನ ಬಯಲು ಪ್ರಸಾರವಾಗಿದ್ದ ಟಿವಿ9 ವರದಿ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.
ಕೊವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಇನ್ಮುಂದೆ ಯಾವುದೇ ಶುಲ್ಕ ನೀಡುವಂತಿಲ್ಲ ಎಂದು ಬಿಬಿಎಂಪಿ ಸೂಚನೆ ನೀಡಿದೆ. ಜೊತೆಗೆ, ಕೊವಿಡ್ನಿಂದ ಮೃತಪಟ್ಟವರ ಶವ ಸಂಸ್ಕಾರದ ವೆಚ್ಚವನ್ನ ಬಿಬಿಎಂಪಿಯೇ ಭರಿಸಲಿದೆ.
ಪ್ರತಿ ಶವ ಸಂಸ್ಕಾರಕ್ಕೆ ಒಟ್ಟು 1750 ರೂಪಾಯಿ ಭರಿಸಲಿರುವ ಬಿಬಿಎಂಪಿ ಕೊವಿಡ್ನಿಂದ ಮೃತಪಟ್ಟರ ಅಂತ್ಯ ಸಂಸ್ಕಾರಕ್ಕೆ ಯಾವುದೇ ಹಣ ಪಡೆಯುವಂತಿಲ್ಲ ಎಂಬ ಆದೇಶ ಹೊರಡಿಸಿದೆ.
ರಣಹದ್ದುಗಳು.. ಬೆಂಗಳೂರಿನ ವಿದ್ಯುತ್ ಚಿತಾಗಾರಗಳಲ್ಲಿ ಡೆಡ್ಬಾಡಿ ಹೆಸರಲ್ಲೂ ಹಣ ಲೂಟಿ!
Published On - 10:32 am, Sat, 25 July 20