ಪತಿಯನ್ನು ಕಳೆದುಕೊಂಡಿರುವ ಬಿಸಿ ಪಾಟೀಲ್ರ ಮಗಳ ದುಃಖವನ್ನು ಯಾರಿಂದಲೂ ನೋಡಲಾಗದು
ಬಿಸಿ ಪಾಟೀಲ್ ಹೇಳಿದ ಹಾಗೆ ಪ್ರತಾಪ್ ಕುಮಾರ್ ಅವರ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಪ್ರತಾಪ್ ತಂದೆಯ ಸಮಾಧಿ ಪಕ್ಕ ನಡೆಯಲಿದೆ. ನಿನ್ನೆ ವರದಿ ಮಾಡಿರುವ ಹಾಗೆ ಮಕ್ಕಳಾಗಿರದ ಖಿನ್ನತೆಯಿಂದ ಬಳಲುತ್ತಿದ್ದ ಪ್ರತಾಪ ಕುಮಾರ್ ನಿನ್ನೆ ಮಧ್ಯಾಹ್ನ ಕೀಟನಾಶಕವೊಂದನ್ನು ಸೇವಿಸಿ ಸಾವಿಗೆ ಶರಣಾಗಿದ್ದರು
ದಾವಣಗೆರೆ: ಮಾಜಿ ಸಚಿವ ಬಿಸಿ ಪಾಟೀಲ್ ಅವರ ಅಳಿಯನ ಮನೆಯಲ್ಲಿ ಆಕ್ರಂದನ, ವೇದನೆ, ರೋದನೆ ಹೇಳಲಾಗದು. ಪಾಟೀಲ್ ಮೊದಲ ಮಗಳು ಸೌಮ್ಯ ಅವರ ಪತಿ ಕೇವಲ 41 -ವರ್ಷ ವಯಸ್ಸಿನವರಾಗಿದ್ದ ಕೆಜಿ ಪ್ರತಾಪ್ ಕುಮಾರ್ ಎಲ್ಲರನ್ನೂ ಅಗಲಿ ದೂರದ ಲೋಕಕ್ಕೆ ಪಯಣಿಸಿದ್ದಾರೆ. ಪತಿಯ ಶವದ ಮುಂದೆ ಬಿಕ್ಕಿ ಬಿಕ್ಕಿ ರೋದಿಸುತ್ತಿರುವ ಸೌಮ್ಯರನ್ನು ನೋಡಿ ಪಾಟೀಲ್ ದಂಪತಿಯ ಕರಳು ಕತ್ತರಿಸಿದಂತಾಗುತ್ತಿರಬಹುದು. ನಲ್ವತ್ತನ್ನೂ ದಾಟದ ಮಗಳಿಗೆ ವಿಧವೆ ಪಟ್ಟ ಬಂದರೆ ಯಾವ ತಂದೆ ತಾಯಿ ತಾನೇ ಸಹಿಸಿಯಾರು? ಒಂದೇ ಸಮ ರೋದಿಸುತ್ತಿರುವ ಸೌಮ್ಯ ಅವರ ದೇಹ ದುಃಖ ಮತ್ತು ಆಘಾತದಿಂದ ನಡುಗುತ್ತಿದೆ. ಕಂಗಾಲಾಗಿ ಅತ್ತಿತ್ತ ನೋಡಿ ಪುನಃ ಪತಿಯ ಪಾರ್ಥೀವ ದೇಹದೆಡೆ ಶೂನ್ಯ ದೃಷ್ಟಿಯಿಂದ ನೋಡುತ್ತಾರೆ. ಕುಡಿಯೋದು ಬೇಡ, ಅದನ್ನು ಬಿಟ್ಟುಬಿಡಿ ಅಂತ ಎಷ್ಟು ಹೇಳಿದರೂ ಕೇಳಲಿಲ್ಲ ಎಂದು ಆರ್ತರಾಗಿ ಹೇಳುತ್ತಾರೆ. ಅವರ ಪಕ್ಕದಲ್ಲಿ ಪ್ರಾಯಶಃ ಅವರ ತಾಯಿಯಿರಬಹುದು, ಸಂತೈಸುವ ಪ್ರಯತ್ನ ಮಾಡುತ್ತಾರಾದರೂ ಸೌಮ್ಯ ಹೇಗೆ ತಾನೇ ಸಮಾಧಾನಗೊಂಡಾರು?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಳಿಯನ ಸಾವಿನಿಂದ ಮಾಜಿ ಸಚಿವ ಬಿಸಿ ಪಾಟೀಲ್ ಆಘಾತಕ್ಕೊಳಗಾಗಿದ್ದಾರೆ, ಚೇತರಿಕೆಗೆ ಸಮಯ ಬೇಕು