Bear in Temple: ಮಾರಮ್ಮನ ದೇವಾಲಯಕ್ಕೆ ಬಂದ ಜಾಂಬವಂತ

Updated on: Jun 20, 2023 | 10:58 AM

ದಾವಣಗೆರೆಯಲ್ಲಿ ದೇವಸ್ಥಾನವೊಂದಕ್ಕೆ ಕರಡಿ ಪ್ರವೇಶಿಸಿದೆ. ಕರಡಿಯ ಓಡಾಟ ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಜಗಳೂರು ತಾಲೂಕಿನ ಕಣ್ವಕುಪ್ಪೆ ಗ್ರಾಮದ ಮಾರಮ್ಮನ ದೇವಸ್ಥಾನದಲ್ಲಿ ಘಟನೆ ನಡೆದಿದೆ.

ದಾವಣಗೆರೆ: ಬೆಳ್ಳಂ ಬೆಳಗ್ಗೆ ಮಾರಮ್ಮನ ದೇವಸ್ಥಾನದಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಅರಣ್ಯದಿಂದ ದೇವಸ್ಥಾನಕ್ಕೆ ಬಂದ ಕರಡಿ ನೋಡಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಣ್ವಕುಪ್ಪೆ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಕರಡಿ ಬಂದು ಹೋಗಿದೆ. ಇದನ್ನು ದೇವಸ್ಥಾನದ ಸಿಸಿ ಟಿವಿಯಲ್ಲಿ ನೋಡಿದ ಜನ ಭಯ ಭೀತರಾಗಿದ್ದಾರೆ. ಪಕ್ಕದ ರಂಗಯ್ಯದುರ್ಗ ಅರಣ್ಯ ಪ್ರದೇಶದಿಂದ ದೇವಸ್ಥಾನಕ್ಕೆ ಕರಡಿ ಬಂದು ಹೋಗಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸಾಮಾನ್ಯವಾಗಿ ಕರಡಿಗಳು ದೇವಸ್ಥಾನಗಳಲ್ಲಿ ಹಚ್ಚಲಾದ ದೀಪದಲ್ಲಿನ ಎಣ್ಣೆ ಕುಡಿಯಲು ಹಾಗೂ ದೇವಸ್ಥಾನದಲ್ಲಿ ಸಿಗುವ ಹಣ್ಣು ಹಂಪಲು ತಿನ್ನಲು ಬರುತ್ತವೆ ಎಂದು ಹೇಳಲಾಗುತ್ತೆ.

Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More