Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರದಿಂದ ನೆರವು ಬರುವ ಮೊದಲು ರೈತರಿಗೆ ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಒದಗಿಸಬೇಕು: ಆರ್ ಅಶೋಕ

ಕೇಂದ್ರದಿಂದ ನೆರವು ಬರುವ ಮೊದಲು ರೈತರಿಗೆ ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಒದಗಿಸಬೇಕು: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 21, 2023 | 1:51 PM

ಅಸಲಿಗೆ ರೈತರಿಗೆ ಪರಿಹಾರ ಒದಗಿಸಲು ಬೊಕ್ಕಸದಲ್ಲಿ ಹಣವೇ ಇಲ್ಲ, ಇದ್ದಬದ್ದ ಹಣವನ್ನೆಲ್ಲ ಪ್ರೀ ಫ್ರೀ ಅನ್ನುತ್ತಾ ಗ್ಯಾರಂಟಿ ಯೋಜೆನೆಗಳಿಗೆ ಹಂಚಿಬಿಟ್ಟಿದ್ದಾರೆ ಎಂದು ಅಶೋಕ ಹೇಳಿದರು. ಗ್ಯಾರಂಟಿ ಯೋಜನೆಗಳಲ್ಲೂ ಜನರಿಗೆ ಹಣ ತಲುಪುತ್ತಿಲ್ಲ, ಬಿಪಿಎಲ್ ಕಾರ್ಡ್ ಹೊಂದಿರುವವರು ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚಿದ್ದರೆ ಗೃಹ ಲಕ್ಷ್ಮಿ ಯೋಜನೆ ಅಡಿ ಕೇವಲ 70 ಲಕ್ಷ ಜನರಿಗೆ ಮಾತ್ರ ಹಣ ಸಿಕ್ಕಿದೆ ಎಂದು ಮಾಜಿ ಸಚಿವ ಹೇಳಿದರು.

ಕಲಬುರಗಿ: ಜಿಲ್ಲೆಯಲ್ಲಾಗಿರುವ ಬರ ಸರ್ವೆಯನ್ನು ಪರಿಶೀಲಿಸಲು ಗ್ರಾಮೀಣ ಭಾಗಗಳ ಪ್ರವಾಸ ಮಾಡುತ್ತಿರುವ ನಿಯೋಜಿತ ವಿರೋಧ ಪಕ್ಷದ ಆರ್ ಅಶೋಕ (R Ashoka) ಅವರು ಸಂಕಷ್ಟದಲ್ಲಿರುವ ರೈತರಿಗೆ ಇದುವರೆಗೆ ಪರಿಹಾರ ಧನ (compensation) ನೀಡದ ಸಿದ್ದರಾಮಯ್ಯ ಸರ್ಕಾರವನ್ನು (Siddaramaiah Government) ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರ ಸರ್ವೇ ಆಗಲಿ, ಆಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಅಲ್ಲಿಂದ ಬರ ಪರಿಹರ ನಿಧಿ ಮಂಜೂರಾಗಿ ಬರಲಿ ಅಂತ ಕಾಯವುದರಲ್ಲಿ ಅರ್ಥವಿಲ್ಲ. ಮೊದಲು ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ರೈತರಿಗೆ ಪರಿಹಾರ ಒದಗಿಸಿ ಅವರ ಸಂಕಷ್ಟಕ್ಕೆ ನೆರವಾಗಬೇಕು, ಆನಂತರ ಕೇಂದ್ರದಿಂದ ಬಿಡುಗಡೆಯಾಗುವ ಹಣ ಬೊಕ್ಕಸಕ್ಕೆ ಬಂದು ಬಿದ್ದೇ ಬೀಳುತ್ತೆ ಅಂತ ಅಶೋಕ ಹೇಳಿದರು. ಅಸಲಿಗೆ ರೈತರಿಗೆ ಪರಿಹಾರ ಒದಗಿಸಲು ಬೊಕ್ಕಸದಲ್ಲಿ ಹಣವೇ ಇಲ್ಲ, ಇದ್ದಬದ್ದ ಹಣವನ್ನೆಲ್ಲ ಪ್ರೀ ಫ್ರೀ ಅನ್ನುತ್ತಾ ಗ್ಯಾರಂಟಿ ಯೋಜೆನೆಗಳಿಗೆ ಹಂಚಿಬಿಟ್ಟಿದ್ದಾರೆ ಎಂದು ಅಶೋಕ ಹೇಳಿದರು. ಗ್ಯಾರಂಟಿ ಯೋಜನೆಗಳಲ್ಲೂ ಜನರಿಗೆ ಹಣ ತಲುಪುತ್ತಿಲ್ಲ, ಬಿಪಿಎಲ್ ಕಾರ್ಡ್ ಹೊಂದಿರುವವರು ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚಿದ್ದರೆ ಗೃಹ ಲಕ್ಷ್ಮಿ ಯೋಜನೆ ಅಡಿ ಕೇವಲ 70 ಲಕ್ಷ ಜನರಿಗೆ ಮಾತ್ರ ಹಣ ಸಿಕ್ಕಿದೆ ಎಂದು ಮಾಜಿ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ