Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಯುವಕ ಹೆಸರಿಗೆ ಯೂಟ್ಯೂಬರ್! ಆದರೆ ಕ್ರಿಕೆಟ್ ಬೆಟ್ಟಿಂಗ್ ಸಹ ನಡೆಸುತ್ತಿದ್ದನಾ? ವಿಶಾಖಪಟ್ಟಣ ಬಂದರಿನಲ್ಲಿ ನಡೆದಿದ್ದ ಅಗ್ನಿ ಅವಘಡದಿಂದ ಹೊರಬಿದ್ದಿದೆ ಆಘಾತಕಾರಿ ಸುದ್ದಿ

ಆ ಯುವಕ ಹೆಸರಿಗೆ ಯೂಟ್ಯೂಬರ್! ಆದರೆ ಕ್ರಿಕೆಟ್ ಬೆಟ್ಟಿಂಗ್ ಸಹ ನಡೆಸುತ್ತಿದ್ದನಾ? ವಿಶಾಖಪಟ್ಟಣ ಬಂದರಿನಲ್ಲಿ ನಡೆದಿದ್ದ ಅಗ್ನಿ ಅವಘಡದಿಂದ ಹೊರಬಿದ್ದಿದೆ ಆಘಾತಕಾರಿ ಸುದ್ದಿ

ಸಾಧು ಶ್ರೀನಾಥ್​
|

Updated on: Nov 21, 2023 | 1:16 PM

ಯೂಟ್ಯೂಬ್‌ನಲ್ಲಿ ಸ್ಥಳೀಯ ಹುಡುಗ ನಾನಿ ಸಮುದ್ರದಲ್ಲಿ ಬೇಟೆಯಾಡಲು ಹೋಗಿ... ಬಲೆಗೆ ಬಿದ್ದ ಮೀನುಗಳ ದೃಶ್ಯಗಳನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡುತ್ತಾನೆ. ಈ ಮೂಲಕ ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಆತನಿಗೆ ಉತ್ತಮ ಫಾಲೋವರ್ಸ್ ಇದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ಬಾಲಕ ನಾನಿ ಅಪಘಾತದ ದೃಶ್ಯಗಳನ್ನು ಚಿತ್ರೀಕರಿಸಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ.

ವೈಜಾಗ್ ಫಿಶಿಂಗ್ ಹಾರ್ಬರ್ ಅಗ್ನಿ ಅವಘಡದ ( Fire) ತಾಜಾ ಸುದ್ದಿಯೇನು ಅಂದರೆ ಪೊಲೀಸರ ತನಿಖೆ ತೀವ್ರಗೊಂಡಿದೆ. ಈ ತನಿಖೆಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಮೀನುಗಾರಿಕಾ ಬಂದರಿನಲ್ಲಿ ( Visakhapatnam) ಮಧ್ಯರಾತ್ರಿ ಲಂಗರು ಹಾಕಿದ್ದ ದೋಣಿಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದಲ್ಲದೇ… ಕ್ರಿಕೆಟ್ ಬೆಟ್ಟಿಂಗ್ ಕಾದಾಟದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದಾಗ್ಯೂ, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೊದಲು ಯೂಟ್ಯೂಬರ್ ಮತ್ತು ಸ್ಥಳೀಯ ಹುಡುಗ ನಾನಿಯನ್ನು ಬಂಧಿಸಿದ್ದರು.

ಭಾನುವಾರ ರಾತ್ರಿ ಅಪಘಾತದ ಪ್ರದೇಶದಲ್ಲಿ ಯೂಟ್ಯೂಬರ್ ನಾನಿ ತನ್ನ ಸ್ನೇಹಿತರೊಂದಿಗೆ ಬೋಟ್‌ನಲ್ಲಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ಹುಡುಗ ನಾನಿ ಎಂಬ ಹೆಸರಿನಲ್ಲಿ ಯೂಟ್ಯೂಬ್ ನಡೆಸುತ್ತಿರುವ ವ್ಯಕ್ತಿ ದೋಣಿಯಲ್ಲಿದ್ದ. ಅಂದು ತನ್ನ ಪತ್ನಿಗೆ ಸೀಮಂತ ಸಮಾರಂಭವನ್ನು ಆಯೋಜಿಸಿದ್ದ. ಪಾರ್ಟಿಯಲ್ಲಿ ಡ್ರಗ್ಸ್​​ ಗೂ ಬೇಡಿಕೆಯಿತ್ತು. ಅದನ್ನೂ ಆಯೋಜಿಸಲಾಗಿತ್ತು. ಈ ಮಧ್ಯೆ ಪಾರ್ಟಿಯಲ್ಲಿ ನಡೆದ ಜಟಾಪಟಿಯಿಂದಾಗಿ ಕೆಲವರು ಉದ್ದೇಶಪೂರ್ವಕವಾಗಿ ಬೋಟ್​​ಗೆ ಬೆಂಕಿ ತಾಗಿಸಿದ್ದಾರೆ. ಅದು ಇತರೆ ಕೆಲ ದೋಣಿಗಳಿಗೂ ಹಬ್ಬಿ ಅಗ್ನಿ ಅನಾಹುತವಾಗಿದೆ ಎಂದು ವಿಶ್ಕೇಷಿಸಲಾಗಿದೆ. ಇನ್ನೊಂದೆಡೆ ಬೋಟ್ ಮಾರಾಟಕ್ಕೆ ಇಡಲಾಗಿದ್ದು, ಮುಂಗಡ ಹಣ ನೀಡುವ ವಿಷಯವೂ ಘಟನೆಗೆ ಕಾರಣವಾಗಿರಬಹುದು ಎಂಬ ವಾದ ಕೇಳಿ ಬರುತ್ತಿದೆ.

ಯೂಟ್ಯೂಬ್‌ನಲ್ಲಿ ಸ್ಥಳೀಯ ಹುಡುಗ ನಾನಿ ಎಂದು ಗುರುತಿಸಿಕೊಂಡಿದ್ದಾನೆ. ಸಮುದ್ರದಲ್ಲಿ ಬೇಟೆಯಾಡಲು ಹೋಗಿ… ಬಲೆಗೆ ಬಿದ್ದ ಮೀನುಗಳ ದೃಶ್ಯಗಳನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡುತ್ತಾನೆ. ಈ ಮೂಲಕ ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಆತನಿಗೆ ಉತ್ತಮ ಫಾಲೋವರ್ಸ್ ಇದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ಬಾಲಕ ನಾನಿ ಅಪಘಾತದ ದೃಶ್ಯಗಳನ್ನು ಚಿತ್ರೀಕರಿಸಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ.

ಈ ಅವಘಡ ನಿಜವಾಗಿ ಹೇಗೆ ಸಂಭವಿಸಿತು ಮತ್ತು ಅದಕ್ಕೆ ಕಾರಣಗಳೇನು ಎಂಬುದು ನನಗೆ ತಿಳಿದಿಲ್ಲ ಎಂದು ನಾನಿ ವಿಡಿಯೋದಲ್ಲಿ ಹೇಳಿದ್ದಾರೆ. ಆದರೆ ಅಗ್ನಿ ಅವಘಡದ ಸಂದರ್ಭದಲ್ಲಿ ತಾನು ಅಲ್ಲಿ ಇರಲಿಲ್ಲ ಎಂದು ನಾನಿ ಹೇಳಿದ್ದಾನೆ. ಹಾಗಾದರೆ ಬೆಂಕಿ ಅವಘಡದ ವಿಡಿಯೋ ತೆಗೆದು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವುದು ಹೇಗೆ ಎಂಬ ಅನುಮಾನ ಇದೀಗ ಎಲ್ಲರಲ್ಲೂ ಮೂಡಿದೆ.

ಯೂಟ್ಯೂಬರ್ ನಾನಿಯನ್ನು ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ, ಮೊದಲ ಬೋಟ್ ಗೆ ಬೆಂಕಿ ತಾಕಿದಾಗ ಸಮಯ ರಾತ್ರಿ 11.15 ಎಂದು ಪೊಲೀಸರು ಹೇಳುತ್ತಾರೆ. 11.45ಕ್ಕೆ ನಾನಿ ಅಲ್ಲಿಗೆ ಬಂದಿದ್ದು ಮೊಬೈಲ್ ಟ್ರ್ಯಾಕಿಂಗ್ ಮೂಲಕ ತಿಳಿದು ಬಂದಿದೆ. ತನ್ನ ದೋಣಿ ಸುಡುತ್ತಿರುವುದನ್ನು ತಿಳಿದು ನಾನಿ ಅಲ್ಲಿಗೆ ಹೋಗಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ವೇಳೆ ನಾನಿ ಇಲ್ಲಿಗೆ ಹೋಗಿದ್ದರು.. ಮೊಬೈಲ್ ಲೊಕೇಶನ್ ಎಲ್ಲಿತ್ತು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ವಿದ್ಯಮಾನಗಳ ಸಮ್ಮುಖದಲ್ಲಿ ನಾನಿ ಸುತ್ತಲೇ ತನಿಖೆ ಗಿರಿಕಿ ಹೊಡೆಯುತ್ತಿದೆ. ಜೊತೆಗೆ ಕ್ರಿಕೆಟ್ ಬೆಟ್ಟಿಂಗ್ ಹಿನ್ನೆಲೆಯಲ್ಲಿಯೂ ಈ ಘಟನೆ ನಡೆದಿದೆಯಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಟ್ಟಿಂಗ್ ಗ್ಯಾಂಗ್ ನಡುವಣ ಘರ್ಷಣೆ ಹಿನ್ನೆಲೆಯಲ್ಲಿ ಅವಘಡ ನಡೆದಿದ್ದು, ತನಿಖೆ ಆರಂಭಿಸಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಸ್ಥಳೀಯ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಕಿ ಅವಘಡದಿಂದ ಅಪಾರ ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮೀನುಗಳ ಜತೆಗೆ 40 ಬೋಟ್​​ ಗಳೂ ಸುಟ್ಟು ಕರಕಲಾಗಿವೆ. ಮುಖ್ಯಮಂತ್ರಿ ವೈಎಸ್ ಜಗನ್ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಮೀನುಗಾರರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.