AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಪ್ರಕಾರ ರಾಜ್ಯದ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ!

ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಪ್ರಕಾರ ರಾಜ್ಯದ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ!

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 21, 2023 | 12:23 PM

ಸತೀಶಣ್ಣ ಅವರು ಸರ್ಕಾರದಲ್ಲಿ ಉತ್ತಮ ವರ್ಚಸ್ಸು ಹೊಂದಿರುವ ಬೆಳಗಾವಿ ಗಡಿಭಾಗದ ಅತ್ಯಂತ ಪ್ರಭಾವಿ ನಾಯಕ, ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಅವರು ಮುಂದೆ ಕರ್ನಾಟಕ ಮುಖ್ಯಮಂತ್ರಿಯಾಗುವುದು ಸಹ ಅಷ್ಟೇ ಸತ್ಯ ಅನ್ನುತ್ತಾರೆ. ಅವರು ಮುಖ್ಯಮಂತ್ರಿಯಾದರೆ ನಾನು ಉಪ ಮುಖ್ಯಮಂತ್ರಿಯಾಗುವುದು ಕೂಡ ಸತ್ಯ ಅಂತ ವೈದ್ಯ ಯಾಕೆ ಹೇಳಲಿಲ್ಲವೋ?

ಬೆಳಗಾವಿ: ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ತಾವೇ ಹೈಕಮಾಂಡ್ ನಂತೆ ವರ್ತಿಸುವುದು ಕನ್ನಡಿಗರಲ್ಲಿ ಸೋಜಿಗ ಹುಟ್ಟಿಸುತ್ತಿದೆಯೋ ಅಥವಾ ಹೇವರಿಕೆ ಅಂತ ಗೊತ್ತಾಗುತ್ತಿಲ್ಲ. ಜಿಲ್ಲೆಯ ಯರಗಟ್ಟಿಯಲ್ಲಿ ಕನ್ನೆ ರಾಜ್ಯೋತ್ಸವ ಮತ್ತು ದೀಪಾವಳಿ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಆಯೋಜಿಸಿದ್ದ ಕನ್ನಡ ಜಾತ್ರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಸವದತ್ತಿ ಕಾಂಗ್ರೆಸ್ ಶಾಸಕ ವಿಶ್ವಾಸ್ ವೈದ್ಯ (Vishwas Vaidya), ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರನ್ನು ಹೊಗಳುವ ಭರದಲ್ಲಿ ಮುಂದಿನ ಮುಖ್ಯಮಂತ್ರಿ ಅಂತಲೂ ಘೋಷಿಸಿಬಿಡುತ್ತಾರೆ! ಅಸಲಿಗೆ ಕನ್ನಡ ಜಾತ್ರೆ ಕಾರ್ಯಕ್ರಮಕ್ಕೆ ಅವರೇ ಬರಬೇಕಿತ್ತು ಆದರೆ ವಿದೇಶ ಪ್ರವಾಸದಲ್ಲಿರುವ ಕಾರಣ ತನಗೆ ಹೋಗುವಂತೆ ಸೂಚಿಸಿದರು ಎಂದು ಹೇಳುವ ವೈದ್ಯ, ಸತೀಶಣ್ಣ ಅವರು ಸರ್ಕಾರದಲ್ಲಿ ಉತ್ತಮ ವರ್ಚಸ್ಸು ಹೊಂದಿರುವ ಬೆಳಗಾವಿ ಗಡಿಭಾಗದ ಅತ್ಯಂತ ಪ್ರಭಾವಿ ನಾಯಕ, ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಅವರು ಮುಂದೆ ಕರ್ನಾಟಕ ಮುಖ್ಯಮಂತ್ರಿಯಾಗುವುದು ಸಹ ಅಷ್ಟೇ ಸತ್ಯ ಅನ್ನುತ್ತಾರೆ. ಅವರು ಮುಖ್ಯಮಂತ್ರಿಯಾದರೆ ನಾನು ಉಪ ಮುಖ್ಯಮಂತ್ರಿಯಾಗುವುದು ಕೂಡ ಸತ್ಯ ಅಂತ ವೈದ್ಯ ಯಾಕೆ ಹೇಳಲಿಲ್ಲವೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 21, 2023 12:22 PM