ತಮ್ಮ ಪಕ್ಷ ಎಷ್ಟು ಹಳಸಿದೆ ಅಂತ ಅಶೋಕ ಮೊದಲು ಗಮನಿಸಲಿ, ಆಮೇಲೆ ಕಾಂಗ್ರೆಸ್ ಬಗ್ಗೆ ಮಾತಾಡಲಿ: ಸಿದ್ದರಾಮಯ್ಯ
ಸಿಎಂ ಬದಲಾಗುತ್ತಾರೆ, ಸಿದ್ದರಾಮಯ್ಯ ಗಂಟುಮೂಟೆ ಕಟ್ಟಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇರುತ್ತಾರೆ, ಅದರೆ ಬದಲಾವಣೆ ಆಗೋದಿಲ್ಲ, ತಮ್ಮ ಪಕ್ಷದ ಹೈಕಮಾಂಡ್ ಹೇಳಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು. ಬೆಳಗಾವಿ ಅಧಿವೇಶನ ಸಮಯದಲ್ಲಿ ರಾಜ್ಯಕ್ಕೆ ನೂತನ ಸಿಎಂ ಬಂದಿರುತ್ತಾರೆ ಅಂತ ವಿಜಯೇಂದ್ರ ಹೇಳಿದ್ದರು, ಅದು ನಿಜವಾಯಿತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರು: ವಿರೋಧ ಪಕ್ಷದ ನಾಯಕ ಅರ್ ಅಶೋಕ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡುವ ಮೊದಲು ತಮ್ಮ ಪಕ್ಷ ಎಷ್ಟು ಹಳಸಿದೆ ಅಂತ ನೋಡಿಕೊಳ್ಳಲಿ, ರಾಜ್ಯ ಬಿಜೆಪಿ ಎರಡು ಹೋಳಾಗಿದೆ ಅದನ್ನು ಅವರು ಗಮನಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪ್ರತಿನಿತ್ಯ ಬಿಜೆಪಿ ನಾಯಕರು ಪರಸ್ಪರ ವೈರತ್ವದ ಹೇಳಿಕೆಗಳನ್ನು ನೀಡುತ್ತಾರೆ, ಕೆಟ್ಟ ಮಾತುಗಳನ್ನ ಬಳಸುತ್ತಾರೆ, ಬಿವೈ ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡು ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ನೇರವಾಗಿ ಮತ್ತು ಬಹಿರಂಗವಾಗಿ ಅರೋಪ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸುಗ್ರೀವಾಜ್ಞೆ ಹೊಸ್ತಿಲಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆದ ಮೈಕ್ರೋಫೈನಾನ್ಸ್ ಕಂಪನಿಗಳು