ನಟಿಗೂ ಕಿರುಕುಳ ಕೊಟ್ಟಿದ್ದ, ಸಂಬರ್ಗಿಯನ್ನು ಸುಮ್ಮನೆ ಬಿಡಲ್ಲ: ಪ್ರಕಾಶ್ ರೈ
Prakash Raj vs Prashanth Sambargi: ತಮ್ಮ ನಕಲಿ ಫೋಟೊ ಬಳಸಿ ಸುಳ್ಳು ಸುದ್ದಿ ಹಬ್ಬಲು ಯತ್ನಿಸಿದ್ದಾನೆಂದು ಆರೋಪಿಸಿ ಪ್ರಶಾಂತ್ ಸಂಬರ್ಗಿ ವಿರುದ್ಧ ನಟ ಪ್ರಕಾಶ್ ರೈ ದೂರು ದಾಖಲಿಸಿದ್ದಾರೆ. ಸಂಬರ್ಗಿ ಈ ಹಿಂದೆ ನಟಿಯೊಬ್ಬಾಕೆಗೂ ಕಿರುಕುಳ ನೀಡಿದ್ದಾರೆ ಎಂದು ಪ್ರಕಾಶ್ ರೈ ಆರೋಪ ಮಾಡಿದ್ದಾರೆ.
ತಮ್ಮ ನಕಲಿ ಫೋಟೊ ಹಂಚಿಕೊಂಡು, ಸುಳ್ಳು ಸುದ್ದಿ ಪ್ರಚಾರ ಮಾಡಿದ್ದ ಪ್ರಶಾಂತ್ ಸಂಬರ್ಗಿ ವಿರುದ್ಧ ನಟ ಪ್ರಕಾಶ್ ರೈ ದೂರು ನೀಡಿದ್ದಾರೆ. ಹೈದರಾಬಾದ್ನಿಂದ ಮೈಸೂರಿಗೆ ಬಂದಿದ್ದ ಪ್ರಕಾಶ್ ರೈ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು ನೀಡಿ, ಎಫ್ಐಆರ್ ಕಾಪಿ ಪಡೆದುಕೊಂಡರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಪ್ರಕಾಶ್ ರೈ, ‘ಈ ಪ್ರಶಾಂತ್ ಸಂಬರ್ಗಿ ವಿರುದ್ಧ ಈಗಾಗಲೇ ಕೆಲವು ಪ್ರಕರಣಗಳು ಬಾಕಿ ಇವೆ. ಹಿಂದೆ ನಟಿಯೊಬ್ಬರಿಗೂ ಕಿರುಕುಳ ನೀಡಿದ್ದ ಅದರ ಬಗ್ಗೆಯೂ ದೂರು ನೀಡಲಾಗಿತ್ತು. ಈ ವ್ಯಕ್ತಿಯ ವಿರುದ್ಧ ದೂರು ನೀಡಲು ಮುಂದಾದಾಗ ಹಲವರು ನನಗೆ ಕರೆ ಮಾಡಿ, ಸಂದೇಶ ಕಳಿಸಿ ಅವನನ್ನು ಬಿಡಬೇಡಿ ಎಂದು ಸಂದೇಶಗಳನ್ನು ಕಳಿಸುತ್ತಿದ್ದಾರೆ’ ಎಂದಿದ್ದಾರೆ ಪ್ರಕಾಶ್ ರೈ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 01, 2025 04:45 PM