AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಮತ್ತು ಸಂಗಾತಿಯ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ: ಡಾ ಸೌಜನ್ಯ ವಶಿಷ್ಠ

ಮದುವೆ ಮತ್ತು ಸಂಗಾತಿಯ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ: ಡಾ ಸೌಜನ್ಯ ವಶಿಷ್ಠ

TV9 Web
| Updated By: shivaprasad.hs|

Updated on: Jan 07, 2022 | 9:10 AM

Share

ಪತಿಪತ್ನಿಯ ನಡುವೆ ಜಗಳ ಮನಸ್ತಾಪಗಳು ಆಗುತ್ತಿರುತ್ತವೆ. ಅದರೆ ಅವು ಅತಿರೇಕಕ್ಕೆ ಹೋಗದ ಹಾಗೆ ಎಚ್ಚರವಹಿಸಬೇಕು. ಗಂಡನಾದವನು ಹೆಂಡತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಬಾರದು ಮತ್ತು ದೈಹಿಕ ಹಲ್ಲೆ ಮಾಡಬಾರದು. ಜಗಳ ಪದೇಪದೆ ಆಗುತ್ತಿದ್ದರೆ ಸಂಬಂಧ ಸ್ಟೇಬಲ್ ಆಗಿರುವುದಿಲ್ಲ, ಹಳಸಲಾರಂಭಿಸುತ್ತದೆ.

ಗಂಡಾಗಲೀ ಹೆಣ್ಣಾಗಲೀ ಇಬ್ಬರಿಗೂ ತಮ್ಮ ಮದುವೆ ಬಗ್ಗೆ ಅನೇಕ ನಿರೀಕ್ಷೆ ಮತ್ತು ಕನಸುಗಳಿರುತ್ತವೆ. ಆದರೆ ಆ ಕನಸುಗಳೊಂದಿಗೆ ನಮಗೆ ಸಿಗುವ ಸಂಗಾತಿ ಹೇಗಿರುತ್ತಾರೋ ಎಂಬ ದ್ವಂದ್ವ, ಸಂದೇಹ ಮತ್ತು ಅಳುಕು ಸಹ ಇರುತ್ತವೆ. ನಮ್ಮೆಲ್ಲರ ಬದುಕಿನಲ್ಲಿ ಮದುವೆ ಅನ್ನೋದು ಒಂದು ಮಹತ್ತರ ಘಟನೆ. ಮದುವೆ ಬಗ್ಗೆ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕಾದರೆ, ನಮಗೆ ನಾವು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ನಮ್ಮ ಬೇಕುಗಳು, ಬೇಡಗಳು, ಅಗತ್ಯಗಳು ಮೊದಲಾದವುಗಳನ್ನು ಅನಾಲೈಸ್ ಮಾಡಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ. ಎಲ್ಲಕ್ಕಿಂತ ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು, ನಾನು ಒಬ್ಬ ಉತ್ತಮ ಸಂಗಾತಿಯಾಗಬಲ್ಲನೆ ಅಂತ ಪ್ರಶ್ನಿಸಿಕೊಳ್ಳಬೇಕು. ನಮ್ಮ ಜೊತೆ ನಾವು ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ.

ನಿಮ್ಮ ಅಗತ್ಯಗಳೇನು ಅನ್ನುವುದನ್ನು ಪಟ್ಟಿ ಮಾಡಿಕೊಳ್ಳಿ, ನಿಮ್ಮ ವರ್ತನೆ ಸಂಗಾತಿಗೆ ಇಷ್ಟವಾಗಬಹುದೆ ಎಂದು ಪ್ರಶ್ನಿಸಿಕೊಳ್ಳಿ. ಇಷ್ಟವಾಗಲಾರದು ಅಂತ ಅನಿಸಿದರೆ ಅದನ್ನು ಬದಲಾಯಿಸಲು ಪ್ರಯತ್ನಿಸಿ ಎಂದು ಡಾ ಸೌಜನ್ಯ ಹೇಳುತ್ತಾರೆ. ಮದುವೆಯ ದೀರ್ಘಾವಧಿ ಪರಿಣಾಮದ ಬಗ್ಗೆ ಯೋಚಿಸಬೇಕು. ಯಾಕೆಂದರೆ, ಇದು ಬೆಳಗ್ಗೆ ಶುರುವಾಗಿ ಸಾಯಂಕಾಲ ಮುಗಿಯುವಂಥದಲ್ಲ. ಬದುಕಿನುದ್ದಕ್ಕೂ ನಿಮ್ಮ ಸಂಗಾತಿ ಜೊತೆಗಿರುತ್ತಾರೆ ಎಂದು ಡಾ ಸೌಜನ್ಯ ಹೇಳುತ್ತಾರೆ. ಸಂಗಾತಿಗಳ ನಡುವಿನ ಪ್ರೀತಿ ಕೇವಲ ಒಂದು ದೈಹಿಕ ಆಕರ್ಷಣೆಯೋ, ದುಡ್ಡಿನ ವ್ಯಮೋಹವೋ ಅಗಿರದೆ ಒಂದು ಭಾವನಾತ್ಮಕ ಬಂಧ ಆಗಿರಬೇಕು ಎನ್ನುತ್ತಾರೆ ಸೌಜನ್ಯ.

ಪತಿಪತ್ನಿಯ ನಡುವೆ ಜಗಳ ಮನಸ್ತಾಪಗಳು ಆಗುತ್ತಿರುತ್ತವೆ. ಅದರೆ ಅವು ಅತಿರೇಕಕ್ಕೆ ಹೋಗದ ಹಾಗೆ ಎಚ್ಚರವಹಿಸಬೇಕು. ಗಂಡನಾದವನು ಹೆಂಡತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಬಾರದು ಮತ್ತು ದೈಹಿಕ ಹಲ್ಲೆ ಮಾಡಬಾರದು. ಜಗಳ ಪದೇಪದೆ ಆಗುತ್ತಿದ್ದರೆ ಸಂಬಂಧ ಸ್ಟೇಬಲ್ ಆಗಿರುವುದಿಲ್ಲ, ಹಳಸಲಾರಂಭಿಸುತ್ತದೆ.

ಪತಿ-ಪತ್ನಿಯ ಸಂಬಂಧದಲ್ಲಿ ಗೌರವ ಮತ್ತು ಪ್ರೀತಿ ಒಂದೇ ನಾಣ್ಯದ ಎರಡು ಮುಖಗಳಂತೆ ಎಂದು ಡಾ ಸೌಜನ್ಯ ಹೇಳುತ್ತಾರೆ. ಮನಸ್ತಾಪಗಳಾದಾಗ ನೀವು ಸಾರಿ ಅಂತ ಹೇಳಿದರೆ, ನಿಮ್ಮ ತಲೆಯ ಮೇಲಿನ ಕಿರೀಟ ಕೆಳಗೆ ಬೀಳಲಾರದು.

ಉತ್ತಮ ಹವ್ಯಾಸಗಳನ್ನು ಇಟ್ಟುಕೊಳ್ಳುವುದು, ಬೆಳೆಸಿಕೊಳ್ಳುವುದು ಬಹಳ ಮುಖ್ಯ ಅಂತ ಹೇಳುವ ಡಾ ಸೌಜನ್ಯ ಅವು ಉತ್ತಮ ಸಂಬಂಧಕ್ಕೆ ಪೂರಕಗಳಾಗಿ ಕೆಲಸ ಮಾಡುತ್ತವೆ ಎನ್ನುತ್ತಾರೆ.

ಇದನ್ನೂ ಓದಿ:   ಅಯ್ಯಪ್ಪ ಸ್ವಾಮಿ ಭಕ್ತರಿಂದ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ; ಇಲ್ಲಿದೆ ವಿಡಿಯೋ