ಒಬ್ಬ ಹಿಂದೂ ತನ್ನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುತ್ತಾನೆಯೇ? ಜಿ ಪರಮೇಶ್ವರ್, ಗೃಹ ಸಚಿವ

|

Updated on: Sep 07, 2023 | 1:37 PM

ಕೃಷ್ಣ ಹೇಳಿದ-ಧರ್ಮ ನಾಶವಾಗಿ ಅಧರ್ಮ, ಮತ್ತು ಲೋಕದಲ್ಲಿ ನೀತಿ ಇಲ್ಲವಾಗಿ ಅನೀತಿ ಸೃಷ್ಟಿಯಾದಾಗ ಷ್ಟಮಿಯಾಗಿರುವ ಅದನ್ನು ಹೋಗಲಾಡಿಸಲು ಪುನಃ ಹುಟ್ಟಿಬರುತ್ತೇನೆ-ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಅಂತ ಹೇಳಿದ್ದನ್ನು ಪುನರುಚ್ಛರಿಸಿರುವುದಾಗಿ ಪರಮೇಶ್ವರ್ ಹೇಳಿದರು.

ಬೆಂಗಳೂರು: ಸನಾತನ ಧರ್ಮದ ಅವಹೇಳನಕಾರಿಯಾಗಿ ಮಾತಾಡಿರುವರೆಂದು ಹೇಳುತ್ತಿರುವ ಬಿಜೆಪಿ ನಾಯಕರಿಗೆ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ತಾನ್ಯಾವತ್ತೂ ಹಿಂದೂ ಧರ್ಮದ (Hindu religion) ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿಲ್ಲ ಅಥವಾ ಅದರ ತಿರುಳನ್ನು ಬೇರೆ ಅರ್ಥ ಬರುವಂತೆ ತಿರುಚಿಲ್ಲ ಎಂದು ಹೇಳಿದರು. ತಾನು ಒಬ್ಬ ಹಿಂದೂ ಅಲ್ವಾ? ದಿನಾಲೂ ಗಣೇಶನನ್ನು ನೆನೆಯಲ್ವಾ ಎಂದ ಅವರು, ಪ್ರತಿನಿತ್ಯ ಬೆಳಗ್ಗೆ ಏಳವಾಗ ಮತ್ತು ರಾತ್ರಿ ಮಲಗುವಾಗ ಹೇಳುವ ಸಂಸ್ಕೃತ ಶ್ಲೋಕಗಳನ್ನು ಪಠಿಸಿ, ಬಿಜೆಪಿ ನಾಯಕರಿಗೆ ಆ ಶ್ಲೋಕಗಳನ್ನು ಹೇಳುವಂತೆ ಸವಾಲೆಸೆದರು. ಕೃಷ್ಣ ಜನ್ಮಾಷ್ಟಮಿಯಾಗಿರುವ (Krishna Janmashtami) ಇವತ್ತು ಕೃಷ್ಣ ಹೇಳಿದ-ಧರ್ಮ ನಾಶವಾಗಿ ಅಧರ್ಮ, ಮತ್ತು ಲೋಕದಲ್ಲಿ ನೀತಿ ಇಲ್ಲವಾಗಿ ಅನೀತಿ ಸೃಷ್ಟಿಯಾದಾಗ ಅದನ್ನು ಹೋಗಲಾಡಿಸಲು ಪುನಃ ಹುಟ್ಟಿಬರುತ್ತೇನೆ-ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಅಂತ ಹೇಳಿದ್ದನ್ನು ಪುನರುಚ್ಛರಿಸಿರುವುದಾಗಿ ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on