ಆ ಯುವತಿಯ ಜೊತೆಯೇ ಮದುವೆ ಮಾಡಿಸಿ ಅಂತ ಬೆನ್ನು ಬಿದ್ದ ಪ್ರೇಮಿ, ತಿಲಕ್ ನಗರ ಪೊಲೀಸರು ಏನು ಮಾಡಿದರು ಗೊತ್ತಾ!?

ಸದ್ಯ ದೂರನ್ನು ಸ್ವೀಕರಿಸಿದ ತಿಲಕ್ ನಗರ ಪೊಲೀಸರು ಯುವತಿಯ ಕುಟುಂಬವನ್ನು ಸಂಪರ್ಕ ಮಾಡಿದ್ದಾರೆ. ಪೊಲೀಸರು ಯುವತಿಗೆ ಇಷ್ಟವಿಲ್ಲದಿದ್ದರೂ ಮಣಿಕಂಠ ಹಿಂದೆ ಬಿದ್ದಿದ್ದಾನೆ ಎಂದು ತಮ್ಮನ್ನು ಸಂಪರ್ಕ ಮಾಡಿರುವ ಪೊಲೀಸರಿಗೆ ಯುವತಿಯ ಮನೆಯವರು ಮನವರಿಕೆ ಮಾಡಿಕೊಡುತ್ತಿದ್ದಾರೆ.

ಆ ಯುವತಿಯ ಜೊತೆಯೇ ಮದುವೆ ಮಾಡಿಸಿ ಅಂತ ಬೆನ್ನು ಬಿದ್ದ ಪ್ರೇಮಿ, ತಿಲಕ್ ನಗರ ಪೊಲೀಸರು ಏನು ಮಾಡಿದರು ಗೊತ್ತಾ!?
| Updated By: ಸಾಧು ಶ್ರೀನಾಥ್​

Updated on: Sep 07, 2023 | 2:26 PM

ಬೆಂಗಳೂರಿನಲ್ಲೊಬ್ಬ ವಿಚಿತ್ರ ಪಾಗಲ್ ಪ್ರೇಮಿ ಪೊಲೀಸರಿಗೆ ತಲೆನೋವಾಗಿ ಉದ್ಭವಿಸಿದ್ದಾನೆ! ತನ್ನನ್ನು ಬಿಟ್ಟೋದ ಯುವತಿಯನ್ನೇ ತನಗೆ ಮದುವೆ ಮಾಡಿಸಿ (Marriage) ಅಂತ ಪೊಲೀಸರ ಬೆನ್ನು ಬಿದ್ದಿದ್ದಾನೆ ಈ ಅಮರ ಪ್ರೇಮಿ. ಪ್ರೀತಿ ಪ್ರೇಮ ಅಂತ ಜೊತೆಯಾದಳು (Girlfriend), ನಾನೂ ಜೊತೆಯಾಗಿ ನಿಂತು ನೋಡ್ಕೊಂಡೆ. ಮದುವೆ ಅಂದ ತಕ್ಷಣ ಜಾತಿಯ ನೆಪ ಹೇಳಿ ಬಿಟ್ಟೋದಳು ಅಂತ ಪೊಲೀಸರ ಮುಂದೆ ಮಣಿಕಂಠ ಅನ್ನೋ ಯುವ ಪ್ರೇಮಿ ತನ್ನ ಒಡಲಾಳದ ಅಳಲು ತೋಡಿಕೊಂಡಿದ್ದಾನೆ.  ತಿಲಕ್ ನಗರ ಪೊಲೀಸ್ ಠಾಣೆಗೆ (Tilak nagar Police) ಪ್ರತಿನಿತ್ಯ ಬಂದು ಅಳಲು ತೋಡಿಕೊಳ್ತಾ ಇದಾನೆ ಆ ಯುವಕ. ತಮಿಳುನಾಡು ಮೂಲದ ಮಣಿಕಂಠ ಜಯನಗರದಲ್ಲಿ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡ್ತಿದ್ದಾನೆ. ತಿಂಗಳಿಗೆ 40-50 ಸಾವಿರ ರೂಪಾಯಿ ಸಂಪಾದನೆ ಮಾಡ್ತಾ ಇದ್ದಾನೆ.

ದುಡಿಯೋಕೆ ಅಂತ ಬಂದವನು ಎರಡು ವರ್ಷದ ಹಿಂದೆ ಪ್ರೀತಿಯಲ್ಲಿ ಬಿದ್ದಿದ್ದ. ಕೆಲಸ ಮಾಡುವಾಗ ಪರಿಚಯ ಆದಾಕೆಯ ಜೊತೆ ಪ್ರೀತಿ ಬೆಳೆಸಿಕೊಂಡಿದ್ದ. ಪ್ರೀತಿ ಮಾಡಲು ಶುರು ಮಾಡಿದ್ದೇ ಯುವತಿಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದನಂತೆ. ಬೆಳಿಗ್ಗೆ ತಿಂಡಿಯಿಂದ ಹಿಡಿದು, ಮಧ್ಯಾಹ್ನದ ಊಟ, ರಾತ್ರಿಯ ಊಟಕ್ಕೂ ಈತನೇ ದುಡ್ಡು ಕೊಡುತ್ತಿದ್ದನಂತೆ. ಸುಮಾರು ಎರಡು ವರ್ಷ ಲಕ್ಷಾಂತರ ರೂಪಾಯಿ ಹೀಗೆ ಖರ್ಚು ಮಾಡಿದೆ ಅವಳಿಗಾಗಿ. ಈಗ ನನ್ನ ಜಾತಿಯ ಅಡ್ಡ ಬಂದು ಬಿಟ್ಟೋದಳು ಎಂದು ಅಲವತ್ತುಕೊಂಡಿದ್ದಾನೆ ಪೊಲೀಸರ ಎದುರು.

ಈತ ತನ್ನ ಯುವತಿಗೆ ಕೊಟ್ಟ ಹಣದ ಫೋನ್ ಪೇ ಹಿಸ್ಟರಿ ಜೆರಾಕ್ಸ್ ಪ್ರತಿ ಮಾಡಿಸಿ ಪೊಲೀಸರಿಗೆ ಸಲ್ಲಿಸಿದ್ದಾನೆ. ಅಷ್ಟೇ ಅಲ್ಲದೆ, ಯುವತಿಯ ಜೊತೆ ಮಾಡಿದ ಮೆಸೇಜ್ ಚಾಟಿಂಗ್ ಹಿಡ್ಕೊಂಡು ದಿನ ಪ್ರತಿ ಠಾಣೆಗೆ ಅಲೆದಾಡ್ತಾ ಇದಾನೆ ಈ ಯುವಕ. ದುಡ್ಡು ಹೋದ್ರೂ ಪರವಾಗಿಲ್ಲ ನನಗೆ ನನ್ನ ಪ್ರೀತಿ ಬೇಕು ಅಂತ ಹುಚ್ಚನಂತೆ ಆಡ್ತಾ ಇದಾನೆ ಯುವಕ. ಯುವತಿಯ ಮನೆಯವರ ಜೊತೆ ಮಾತನಾಡಿ ಮದುವೆ ಮಾಡಿಸಿ ಅಂತಾ ಮಣಿಕಂಠ ಪೊಲೀಸರಿಗೆ ದುಂಬಾಲು ಬಿದ್ದಿದ್ದಾನೆ.

ಸದ್ಯ ದೂರನ್ನು ಸ್ವೀಕರಿಸಿದ ತಿಲಕ್ ನಗರ ಪೊಲೀಸರು ಯುವತಿಯ ಕುಟುಂಬವನ್ನು ಸಂಪರ್ಕ ಮಾಡಿದ್ದಾರೆ. ಪೊಲೀಸರು ಯುವತಿಗೆ ಇಷ್ಟವಿಲ್ಲದಿದ್ದರೂ ಮಣಿಕಂಠ ಹಿಂದೆ ಬಿದ್ದಿದ್ದಾನೆ ಎಂದು ತಮ್ಮನ್ನು ಸಂಪರ್ಕ ಮಾಡಿರುವ ಪೊಲೀಸರಿಗೆ ಯುವತಿಯ ಮನೆಯವರು ಮನವರಿಕೆ ಮಾಡಿಕೊಡುತ್ತಿದ್ದಾರೆ.

ಈ ಮಧ್ಯೆ ಪೊಲೀಸರು ಲಲಿತ ಕುಮಾರಿ vs ಸ್ಟೇಟ್ ಆಫ್ ಯೂಪಿ ಪ್ರಕರಣದ ಆಧಾರದಲ್ಲಿ ತನಿಖೆ ಮುಕ್ತಾಯಗೊಳಿಸಿದ್ದಾರೆ. ಅದರಂತೆ… ಯುವತಿಯಿಂದ ಮಾಹಿತಿ ಪಡೆದ ಪೊಲೀಸರು ಯುವತಿಗೆ ಇಚ್ಛೆ ಇಲ್ಲದಿದ್ದರೂ ಯುವಕ ಹಿಂದೆ ಬಿದ್ದಿರುವುದು ಗೋಚರವಾಗಿದೆ. ಹೀಗಾಗಿ ದೂರು ಪಡೆದು, ತನಿಖೆ ಮುಕ್ತಾಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?