ಬೆಳಗಾವಿ: ಬಸವ ತತ್ವದ ಕೆಲ ಸ್ವಾಮೀಜಿಗಳನ್ನು ತಾಲಿಬಾನಿಗಳಿಗೆ ಹೋಲಿಸಿದ ಕಾಡಸಿದ್ದೇಶ್ವರ ಸ್ವಾಮೀಜಿ

Updated By: Ganapathi Sharma

Updated on: Dec 01, 2025 | 10:13 AM

ರಾಯಬಾಗ ಪಟ್ಟಣದಲ್ಲಿ ಹನುಮ ಮಾಲಾಧಾರಿಗಳನ್ನು ಉದ್ದೇಶಿಸಿ ಮಾತನಾಡಿದ ಕೊಲ್ಹಾಪುರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಬಸವ ತತ್ವದ ಕೆಲ ಸ್ವಾಮೀಜಿಗಳ ಕುರಿತು ‘ತಾಲಿಬಾನಿಗಳು’ ಎಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಸ್ವಾಮೀಜಿಗಳ ಬಟ್ಟೆ ಹಾಕಿಕೊಂಡು ತಾಲಿಬಾನಿಗಳಂತೆ ಮಾಡುವವರು ಎಂದು ಅವರು ಹೇಳಿದ್ದಾರೆ. ಸ್ವಾಮೀಜಿ ಹೇಳಿದ್ದೇನು? ಸಂಪೂರ್ಣ ವಿಡಿಯೋ ಇಲ್ಲಿದೆ.

ಬೆಳಗಾವಿ, ಡಿಸೆಂಬರ್ 1: ‘ನಮ್ಮಂತ ಬಟ್ಟೆ ಹಾಕಿಕೊಂಡು ಬಸವ ತಾಲಿಬಾನಿಗಳು ನಿಮ್ಮನ್ನು ಟೀಕೆ ಮಾಡಬಹುದು’ ಎಂದು ಬಸವ ತತ್ವದ ಕೆಲವು ಸ್ವಾಮೀಜಿಗಳನ್ನು ಉದ್ದೇಶಿಸಿ ಕೊಲ್ಹಾಪುರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಹನುಮ ಮಾಲಾಧಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹನುಮ ಮಾಲೆ ಹಾಕಿಕೊಳ್ಳುವವರು ಯಾವಾಗಲೂ ಯಾರಿಗೂ ಕೆಟ್ಟದ್ದು ಮಾಡುವವರಲ್ಲ. ಯಾರನ್ನೂ ತಪ್ಪು ದಾರಿಗೆ ಕೂಡ ಕರೆದೊಯ್ಯುವುದಿಲ್ಲ ಎಂದರು.

ನಮ್ಮ ಹುಡುಗಿಯರನ್ನು ಎತ್ತಾಕೊಂಡು ಹೋಗ್ತಿದ್ದಾರೆ. ಅಂಥವರನ್ನು ಆರತಿ ಬೆಳಗಿ ನಿಮ್ಮನ್ನು ಮನೆಗೆ ಕರೆದುಕೊಂಡು ಬರಬೇಕಾ? ಅವರನ್ನು ಹಿಡಿದುಕೊಂಡು ಬಂದು ಅವರಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕು ಎಂದೂ ಸ್ವಾಮೀಜಿ ಹೇಳಿದ್ದಾರೆ. ಈ ಹಿಂದೆಯೂ ಕಾಡಸಿದ್ದೇಶ್ವರ ಸ್ವಾಮೀಜಿ ಲಿಂಗಾಯತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂಬುದು ಗಮನಾರ್ಹ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ