ಬೆಳಗಾವಿ: ಕಚ್ಚಿದ ಹಾವನ್ನೇ ಹಿಡಿದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಯುವಕ!
ಚಿಕಿತ್ಸೆ ಪಡೆಯಲು ಯುವಕ, ತನಗೆ ಕಚ್ಚಿದ ಹಾವಿನ ಜೊತೆ ಬಿಮ್ಸ್ ಆಸ್ಪತ್ರೆಗೆ ಬಂದಿದ್ದಾನೆ. ಬೆಳಗಾವಿ ತಾಲೂಕಿನ ಹುಂಚ್ಯಾನಹಟ್ಟಿ ಗ್ರಾಮದ ಯುವಕ ಶಾಹಿದ್ (21) ಎಂಬುವರಿಗೆ ಹಾವು ಕಚ್ಚಿದೆ. ಹೀಗಾಗಿ ಚಿಕಿತ್ಸೆ ಪಡೆಯಲು ಹಾವಿನ ಜೊತೆ ಆಸ್ಪತ್ರೆಗೆ ಬಂದಿದ್ದಾನೆ.
ಬೆಳಗಾವಿ, ಮೇ 28: ಬೆಳಗಾವಿ (Belagavi) ಜಿಲ್ಲಾ ಆಸ್ಪತ್ರೆಯಲ್ಲಿ (Hospital) ವಿಚಿತ್ರ ಘಟನೆ ನಡೆದಿದೆ. ಚಿಕಿತ್ಸೆ ಪಡೆಯಲು ಯುವಕ, ತನಗೆ ಕಚ್ಚಿದ ಹಾವಿನ (Snake) ಜೊತೆ ಬಿಮ್ಸ್ (BIMS) ಆಸ್ಪತ್ರೆಗೆ ಬಂದಿದ್ದಾನೆ. ಬೆಳಗಾವಿ ತಾಲೂಕಿನ ಹುಂಚ್ಯಾನಹಟ್ಟಿ ಗ್ರಾಮದ ಯುವಕ ಶಾಹಿದ್ (21) ಮನೆ ಬಳಿ ಹಾವು ಬಂದಿದೆ. ಶಾಹಿದ ಹಾವು ಹಿಡಿದಿದ್ದಾನೆ. ಬಳಿಕ ಬೆಟ್ಟದ ಮೇಲೆ ಹಾವು ಬಿಡುವ ಸಂದರ್ಭದಲ್ಲಿ ಶಾಹಿದ್ಗೆ ಹಾವು ಕಚ್ಚಿದೆ.
ಕೂಡಲೆ ಶಾಹಿದ್ ಸ್ನೇಹಿತರ ಜೊತೆಗೂಡಿ ಹಾವನ್ನು ಡಬ್ಬದಲ್ಲಿ ಹಾಕಿಕೊಂಡು ಚಿಕಿತ್ಸೆ ಪಡೆಯಲು ಬಿಮ್ಸ್ ಆಸ್ಪತ್ರೆಗೆ ಬಂದಿದ್ದಾನೆ.
“ಯಾವ ಹಾವು ಕಚ್ಚಿದೆ ಅಂತ ಗೊತ್ತಾದರೆ, ಸುಲಭವಾಗಿ ಚಿಕಿತ್ಸೆ ನೀಡಬಹುದು” ಎಂದು ಶಾಹಿದ್ ಆಸ್ಪತ್ರೆಗ ಹಾವು ತಂದಿದ್ದಾನೆ. ಡಬ್ಬದಲ್ಲಿ ಇರುವ ಜೀವಂತ ಹಾವು ನೋಡಿ ಆಸ್ಪತ್ರೆ ಸಿಬ್ಬಂದಿ, ರೋಗಿಗಳು ತಬ್ಬಿಬ್ಬಾಗಿದ್ದಾರೆ. ಚಿಕಿತ್ಸೆ ಪಡೆದು ಸ್ನೇಹಿತರ ಜೊತೆ ಬೈಕ್ನಲ್ಲಿ ಹಾವು ಸಮೇತ ವಾಪಾಸ್ ಹೋಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos