ಶಾಲಾ ಆರಂಭದ ಮೊದಲ ದಿನವೇ ಶಾಲೆಗೆ ಬೀಗ ಹಾಕಿದ ಎಸ್‌ಡಿಎಂಸಿ ಸದಸ್ಯರು; ಯಾಕೆ ಗೊತ್ತಾ?
ಬೇಸಿಗೆ ರಜೆ ಮುಗಿಸಿ ನಾಳೆಯಿಂದ ಶಾಲೆ ಆರಂಭ ಆಗುತ್ತಿದೆ. ಈ ಮಧ್ಯೆ ಇಂದು(ಮೇ.29) ಶಾಲಾ ಆರಂಭಕ್ಕೆ ಸ್ವಚ್ಛತೆಗೊಳಿಸಲು ಬಂದ ದಿನವೇ ಎಸ್‌ಡಿಎಂಸಿ(SDMC)ಸದಸ್ಯರು ಸೇರಿಕೊಂಡು ಶಾಲೆಗೆ ಬೀಗ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ(Athani) ತಾಲೂಕಿನ ತಂಗಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಮುಖ್ಯ ಶಿಕ್ಷಕನ್ನು ಬದಲಾವಣೆ ಮಾಡುವಂತೆ ಎಸ್‌ಡಿಎಂಸಿ ಸದಸ್ಯರು ಪಟ್ಟು ಹಿಡಿದಿದ್ದಾರೆ.
ಬೆಳಗಾವಿ, ಮೇ.29: ಶಾಲಾ ಆರಂಭಕ್ಕೆ ಸ್ವಚ್ಛತೆಗೊಳಿಸಲು ಬಂದ ದಿನವೇ ಎಸ್‌ಡಿಎಂಸಿ(SDMC)ಸದಸ್ಯರು ಸೇರಿಕೊಂಡು ಶಾಲೆಗೆ ಬೀಗ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ(Athani) ತಾಲೂಕಿನ ತಂಗಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಮುಖ್ಯ ಶಿಕ್ಷಕನ್ನು ಬದಲಾವಣೆ ಮಾಡುವಂತೆ ಎಸ್‌ಡಿಎಂಸಿ ಸದಸ್ಯರು ಪಟ್ಟು ಹಿಡಿದಿದ್ದಾರೆ. ಹೌದು, ಕಳೆದ ಒಂದು ವರ್ಷದಿಂದ ಮುಖ್ಯ ಶಿಕ್ಷಕ ಮತ್ತು ಎಸ್‌ಡಿಎಂಸಿ ಸದಸ್ಯರ ನಡುವೆ ಜಟಾಪಟಿ ನಡೆಯುತ್ತಿದೆ. ಮುಖ್ಯ ಶಿಕ್ಷಕ ಸರಿಯಾಗಿ ಶಾಲೆಗೆ ಬರಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಡಿಡಿಪಿಐ, ಬಿಇಒಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಇದರಿಂದ ರೊಚ್ಚಿಗೆದ್ದ ಶಾಲಾ ಎಸ್‌ಡಿಎಂಸಿ ಸದಸ್ಯರು ಮುಖ್ಯ ಶಿಕ್ಷಕ ಎಂ.ಎಸ್ ಚೌಗಲೆ ಅವರನ್ನು ಬದಲಿಸಿ, ಬೇರೆ ಶಿಕ್ಷಕರನ್ನು ನಿಯೋಜಿಸಲು ಕೋರಿದ್ದಾರೆ. ಆದರೆ, ಮನವಿಗೆ ಸ್ಪಂಧಿಸದ ಅಧಿಕಾರಿಗಳ ವಿರುದ್ಧ ಇದೀಗ ಆಕ್ರೋಶ ವ್ಯಕ್ತಪಡಿಸಿ, ಶಾಲೆಗೆ ಬೀಗ ಹಾಕಿ ಶಾಲೆಯ ಮುಂದೆಯೇ ಆಕ್ರೋಶ ಹೊರಹಾಕುತ್ತಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ