ಮೀರಿದ ರೈತರ ತಾಳ್ಮೆ: ಬೆಳಗಾವಿಯಲ್ಲಿ ಮತ್ತೊಂದು ಹಂತಕ್ಕೆ ಕಬ್ಬು ಬೆಳೆಗಾರರ ಹೋರಾಟ

Edited By:

Updated on: Oct 29, 2026 | 7:56 PM

ಕಬ್ಬು ಬೆಳಗಾರರ ತಾಳ್ಮೆ ಮೀರಿದ್ದು, ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಕಬ್ಬಿಗೆ 5,500 ದರ ನಿಗದಿ ಸಂಬಂಧ ಸಕ್ಕರೆ ಕಾರ್ಖಾನೆಗಳಿಗೆ ಕೊಟ್ಟಿದ್ದ 2 ದಿನದ ಡೆಡ್​ಲೈನ್ ಮುಗಿದೆ. ಇದೀಗ ಸರ್ಕಾರಕ್ಕೆ ನಾಳೆ (ಅ.30) ಸಂಜೆ 5 ಗಂಟೆವರೆಗೆ ಲಾಸ್ಟ್​ ಡೆಡ್​​ಲೈನ್ ನೀಡಿದ್ದು, ಒಂದು ವೇಳೆ ತೀರ್ಮಾನ ಕೈಗೊಳ್ಳದಿದ್ದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಂದ್​ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.

ಬೆಳಗಾವಿ, (ಅಕ್ಟೋಬರ್ 29): ಕಬ್ಬು ಬೆಳಗಾರರ ತಾಳ್ಮೆ ಮೀರಿದ್ದು, ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಕಬ್ಬಿಗೆ 5,500 ದರ ನಿಗದಿ ಸಂಬಂಧ ಸಕ್ಕರೆ ಕಾರ್ಖಾನೆಗಳಿಗೆ ಕೊಟ್ಟಿದ್ದ 2 ದಿನದ ಡೆಡ್​ಲೈನ್ ಮುಗಿದೆ. ಇದೀಗ ಸರ್ಕಾರಕ್ಕೆ ನಾಳೆ (ಅ.30) ಸಂಜೆ 5 ಗಂಟೆವರೆಗೆ ಲಾಸ್ಟ್​ ಡೆಡ್​​ಲೈನ್ ನೀಡಿದ್ದು, ಒಂದು ವೇಳೆ ತೀರ್ಮಾನ ಕೈಗೊಳ್ಳದಿದ್ದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಂದ್​ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.

ಈ ಬಗ್ಗೆ ಗುರ್ಲಾಪುರದಲ್ಲಿ ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿದ್ದು.ಸಕ್ಕರೆ ಕಾರ್ಖಾನೆಗಳಿಗೆ ಕೊಟ್ಟ 2 ದಿನದ ಡೆಡ್​ಲೈನ್ ಮುಗಿದಿದ್ದು, ನಾಳೆ ಸಂಜೆಯೊಳಗೆ ದರ ಘೋಷಣೆಗೆ ಸರ್ಕಾರಕ್ಕೆ ಡೆಡ್​ಲೈನ್ ನೀಡಲಾಗಿದೆ. MSP ಏರಿಕೆ, ರಾಜ್ಯ ಸರ್ಕಾರದಿಂದ 1 ಸಾವಿರ ಬೆಂಬಲ ಬೆಲೆ, ಕಾರ್ಖಾನೆಗಳು ಪ್ರತಿ ಟನ್​ಗೆ 4,500 ದರ ಘೋಷಿಸಬೇಕು. ಒಂದು ವೇಳೆ ಆಗದಿದ್ದರೆ ನಾಳೆ ಸಂಜೆ 5 ಗಂಟೆಗೆ ಹೆದ್ದಾರಿ ಬಂದ್ ಘೋಷಣೆ ಮಾಡ್ತೇವೆ. ಅಲ್ಲದೇ ಅಕ್ಟೋಬರ್31 ರಂದು ಮತ್ತೆ ಹತ್ತರಗಿ ಟೋಲ್ ಬಂದ್ ಮಾಡುತ್ತೇವೆ. ಲಕ್ಷಾಂತರ ರೈತರು ಹೋರಾಟದ ಭಾಗವಹಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 29, 2026 07:55 PM
Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More