ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿ ಹೊರವಲಯದಲ್ಲೇ ಹೋರಾಟಗಾರರು ವಶಕ್ಕೆ
ಕಬ್ಬು ಬೆಳೆಗಾರರ ಜೈಲ್ ಭರೋ ಚಳವಳಿ ವೇಳೆ ಬೆಳಗಾವಿ ಪೊಲೀಸರು ಪಾದಯಾತ್ರೆ ತಡೆದು ರೈತರನ್ನು ವಶಕ್ಕೆ ಪಡೆದಿದ್ದು, ಪೊಲೀಸ್ ಕ್ರಮ ಖಂಡಿಸಿ ರೈತ ಮುಖಂಡ ಚೂನಪ್ಪ ಪೂಜಾರಿ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ್ದಾರೆ. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ, ತಳ್ಳಾಟವೂ ನಡೆದಿದೆ.
ಬೆಳಗಾವಿ, ನವೆಂಬರ್ 05: ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ ಹಿನ್ನೆಲೆ ಬೆಳಗಾವಿ ಹೊರವಲಯದ ಮುಕ್ತಿ ಮಠದ ಬಳಿ ರೈತರ ಪಾದಯಾತ್ರೆಗೆ ಪೊಲೀಸರು ತಡೆಯೊಡ್ಡಿದ್ದಾರೆ. ರೈತ ಮುಖಂಡ ಚೂನಪ್ಪ ಪೂಜಾರಿ ಸೇರಿ ಧರಣಿನಿರತ 200ಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ, ತಳ್ಳಾಟ ನಡೆದಿದೆ. ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಚೂನಪ್ಪ ಪೂಜಾರಿ ಕಿಡಿ ಕಾರಿದ್ದು, ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 05, 2026 11:38 AM
Loading...
Unable to load recommendations.
Follow Us
