ಸುವರ್ಣಸೌಧದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಮತ್ತು ಅಶೋಕ್ ನಡುವೆ ‘ನಾಟಿಕೋಳಿ’ ಮಾತು
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನಡುವೆ ಸೌಹಾರ್ದಯುತ ಮಾತುಕತೆ ನಡೆಯಿತು. ಅಶೋಕ್ ಅವರ ಸಣ್ಣಗಾಗಿದ್ದನ್ನು ಗಮನಿಸಿ ಸಿಎಂ ಪ್ರಶ್ನಿಸಿದ ವೇಳೆ, ಅಶೋಕ್ ಅವರು ನೀಡಿದ 'ನಾಟಿ ಕೋಳಿ' ಹೇಳಿಕೆ ಇಬ್ಬರ ಮುಖದಲ್ಲಿ ನಗು ಮೂಡಿಸಿತು. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾಯಕರ ನಡುವಿನ ಸೌಹಾರ್ದದ ದೃಶ್ಯ, ನೆರೆದಿದ್ದವರ ಗಮನ ಸೆಳೆಯಿತು.
ಬೆಳಗಾವಿ, ಡಿಸೆಂಬರ್ 08: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನಡುವೆ ಸೌಹಾರ್ದಯುತ ಮಾತುಕತೆ ನಡೆದಿದೆ. ಸುವರ್ಣಸೌಧದ ಮೊಗಸಾಲೆಯಲ್ಲಿ ಭೇಟಿಯಾದ ಉಭಯ ನಾಯಕರು, ಕುಶಲೋಪರಿ ವಿಚಾರಗಳೊಂದಿಗೆ ತಮಾಷೆಯ ಸಂಭಾಷಣೆ ನಡೆಸಿದ್ದಾರೆ. ಅಶೋಕ್ ಅವರನ್ನು ನೋಡಿ ‘ಏನಯ್ಯ ಸಣ್ಣಗಾಗಿದ್ದೀಯಾ?” ಎಂದು ಸಿಎಂ ಸಿದ್ದರಾಮಯ್ಯ ಕೇಳಿದಾಗ, ‘ನಾಟಿ ಕೋಳಿ ತಿನ್ನುವುದು ಬಿಟ್ಟಿದ್ದೇನೆ ಸರ್’ ಎಂದು ತಮಾಷೆಯಾಗಿ ಅವರು ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅದನ್ನೆಲ್ಲಾ ಬಿಡಬಾರದು, ಆಗಾಗ ತಿನ್ನುತ್ತಾ ಇರಬೇಕು’ ಎಂದು ನಗುತ್ತಾ ಹೇಳಿದ್ದಾರೆ. ಬಳಿಕ ಇಬ್ಬರು ನಾಯಕರು ಒಟ್ಟಿಗೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಸುನಿಲ್ ಕುಮಾರ್ ಕೂಡ ಇದ್ದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
