ಬೆಳಗಾವಿಯಲ್ಲಿ ಮತ್ತೊಂದು ಬಹುಕೊಟಿ ವಂಚನೆ ಪ್ರಕರಣ: 165 ಕೋಟಿ ರೂ. ದೋಖಾ

Edited By:

Updated on: Jul 15, 2026 | 2:33 PM

ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿ ಆಮಿಷ ತೋರಿಸಿ ನೂರಾರು ಕೋಟಿ ರೂಪಾಯಿ ವಂಚನೆ ನಡೆಸಿರುವ ಆರೋಪ ಬೆಳಗಾವಿಯಲ್ಲಿ ಕೇಳಿಬಂದಿದೆ. ಅಪೆಕ್ಸ್​ ಬಿಜ್ ಕಾರ್ಪ್ LLP ಸಂಸ್ಥೆಯಿಂದ ಮೋಸ ನಡೆದಿದ್ದು, ಮಾಲೀಕರಾದ ಕಾಶೀನಾಥ್ ವಾಗ್ಮೋರೆ ಮತ್ತು ಗಣೇಶ್ ಭಂಡಾರಿ ಕಚೇರಿಗೆ ಬೀಗ ಜಡಿದು ಪರಾರಿಯಾಗಿದ್ದಾರೆ. ಹೂಡಿಕೆದಾರರ ದೂರಿನನ್ವಯ ಎಫ್ಐಆರ್ ದಾಖಲಾಗಿದ್ದು,50 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿರುವುದರಿಂದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗುತ್ತೆ ಎಂದು ಬೆಳಗಾವಿ ನಗರ ಪೊಲೀಸ್ ಕಮಿಷನರ್​ ಭೂಷಣ್ ಬೊರಸೆ ತಿಳಿಸಿದ್ದಾರೆ.

ಬೆಳಗಾವಿ, ಜುಲೈ 15: ನಗರದಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಹೆಚ್ಚಿ‌ನ ಬಡ್ಡಿ ಆಮಿಷವೊಡ್ಡಿ ಗ್ರಾಹಕರಿಗೆ 165 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಅಪೆಕ್ಸ್​ ಬಿಜ್ ಕಾರ್ಪ್ LLP  ಸಂಸ್ಥೆಯಿಂದ ಮೋಸ ನಡೆದಿರೋದಾಗಿ ಬೆಳಗಾವಿ ನಗರ ಪೊಲೀಸ್ ಕಮಿಷನರ್​ ಭೂಷಣ್ ಬೊರಸೆ ಹೇಳಿಕೆ ನೀಡಿದ್ದಾರೆ. ವಂಚನೆ ಬಗ್ಗೆ ಅಶೋಕ ಬಿಸಗುಪ್ಪಿ ಎಂಬವರು ಜುಲೈ 13ರಂದು ಬೆಳಗಾವಿಯ ಟಿಳಕವಾಡಿ ಠಾಣೆ ದೂರು ನೀಡಿದ್ದರು. ಅಪೆಕ್ಸ್ ಕಂಪನಿಯಲ್ಲಿ ಸಾವಿರಾರು ಜನರು ಇನ್ವೆಸ್ಟ್ ಮಾಡಿದ್ದು, ಶೇ.4ರಷ್ಟು ಬಡ್ಡಿ ಆಮಿಷವೊಡ್ಡಿ ಜನರಿಂದ ಹಣ ಸಂಗ್ರಹಿಸಿದ್ದಾರೆ. ಹ್ಯಾಂಡ್ ಲೋನ್ ಅಗ್ರಿಮೆಂಟ್ ಮತ್ತು ಚೆಕ್ ಕೊಟ್ಟಿದ್ದಾರೆ. ಆದರೆ ಹಣ ವಾಪಸ್​​ ನೀಡದೆ ಪರಾರಿಯಾಗಿದ್ದಾರೆ. ಹೂಡಿಕೆದಾರರ ದೂರಿನನ್ವಯ ಎಫ್ಐಆರ್ ದಾಖಲಾಗಿದ್ದು, ಕಾಶಿನಾಥ್​ ವಾಗ್ಮರೆ ಹಾಗೂ ಗಣೇಶ್​​ ಬಂಡಾರಿ ದಂಪತಿಗಳು ಇದರಲ್ಲಿ ಭಾಗಿಯಾಗಿದ್ದಾರೆ. 50 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿರುವುದರಿಂದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗುತ್ತೆ. ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More