ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್
ಬಳ್ಳಾರಿ ಗಲಭೆ ಪ್ರಕರಣ ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ಅವರ ಆಪ್ತ ಸತೀಶ್ ರೆಡ್ಡು ಬಂಧನ ಆಗ್ಬೇಕು ಎಂದು ಜನಾರ್ದನ ರೆಡ್ಡಿ, ರಾಮುಲು ಒತ್ತಾಯ ಮಾಡುತ್ತಿದ್ದಾರೆ. ಆದ್ರೆ ಇದುವರೆಗೂ ಶಾಸಕ ಭರತ್ ರೆಡ್ಡಿ ಬಂಧನ ಆಗಿಲ್ಲ. ಇನ್ನು ಈ ಪ್ರಕರಣ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು,ಸಿಐಡಿ ಅಧಿಕಾರಿಗಳು ಸಹ ಸ್ಥಳಕ್ಕೆ ಎಂಟ್ರಿ ಕೊಟ್ಟು ತನಿಖೆ ಚುರುಕುಗೊಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಗಲಭೆಯ ಮತ್ತಷ್ಟು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಬಳ್ಳಾರಿ, (ಜನವರಿ 11): ಬಳ್ಳಾರಿ ಗಲಭೆ ಪ್ರಕರಣ ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ಅವರ ಆಪ್ತ ಸತೀಶ್ ರೆಡ್ಡು ಬಂಧನ ಆಗ್ಬೇಕು ಎಂದು ಜನಾರ್ದನ ರೆಡ್ಡಿ, ರಾಮುಲು ಒತ್ತಾಯ ಮಾಡುತ್ತಿದ್ದಾರೆ. ಆದ್ರೆ ಇದುವರೆಗೂ ಶಾಸಕ ಭರತ್ ರೆಡ್ಡಿ ಬಂಧನ ಆಗಿಲ್ಲ. ಇನ್ನು ಈ ಪ್ರಕರಣ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು,ಸಿಐಡಿ ಅಧಿಕಾರಿಗಳು ಸಹ ಸ್ಥಳಕ್ಕೆ ಎಂಟ್ರಿ ಕೊಟ್ಟು ತನಿಖೆ ಚುರುಕುಗೊಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಗಲಭೆಯ ಮತ್ತಷ್ಟು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಶ್ರೀರಾಮುಲುರನ್ನ ಹೊಡೀರಿ ಎಂದು ಸತೀಶ್ ರೆಡ್ಡಿ ಹೇಳುತ್ತಿದ್ದ. ಪ್ರೀ ಪ್ಲ್ಯಾನ್ಡ್ ಮಾಡಿ ಕಾಂಗ್ರೆಸ್ನವರು ಈ ಗಲಾಟೆ ಮಾಡಿದ್ದಾರೆ. ಗಲಾಟೆ ವೇಳೆ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಹೇಳ್ತಿದ್ದ. ಶ್ರೀರಾಮುಲು ಏನು ದೊಡ್ಡ ಬ್ಯಾಡರ ನಾಯಕನಾ ಅಂತಾ ಹೇಳ್ತಿದ್ರು. ಆ ವಿಡಿಯೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ ಎಂದಿದ್ದಾರೆ.
