ಆ್ಯಸಿಡ್ ಎರಚಿದ ನಾಗೇಶನನ್ನು ಹುಡುಕಿಕೊಡಿ ಅಂತ ಮಾಧ್ಯಮದ ಮುಂದೆ ಬೇಡಿಕೊಂಡರು ಸಂತ್ರಸ್ತೆ ಚಿಕ್ಕಮ್ಮ

ಆ್ಯಸಿಡ್ ಎರಚಿದ ನಾಗೇಶನನ್ನು ಹುಡುಕಿಕೊಡಿ ಅಂತ ಮಾಧ್ಯಮದ ಮುಂದೆ ಬೇಡಿಕೊಂಡರು ಸಂತ್ರಸ್ತೆ ಚಿಕ್ಕಮ್ಮ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 29, 2022 | 7:45 PM

ನಾಗೇಶನನ್ನು ಹುಡುಕಿಕೊಡಿ ಅಂತ ಅವರು ಮಾಧ್ಯಮದವರಿಗೆ ಮನವಿ ಮಾಡುತ್ತಿದ್ದಾರೆ. ತನಗೂ ತಾಯಿಯ ರೂಪದಲ್ಲಿ ಒಬ್ಬ ಹೆಣ್ಣುಮಗಳು ಮನೆಯಲ್ಲಿದ್ದಾಳೆ ಎಂಬ ಅರಿವು ಅವನಿಗಿಲ್ಲವೇ? ರಸ್ತೆ ಮೇಲೆ ಓಡಾಡುವ ಮಹಿಳೆಯರು ಹೀಗೆ ದಾಳಿಗೊಳಗಾದರೆ ಏನು ಗತಿ ಅಂತ ರತ್ನಮ್ಮ ಕೇಳುತ್ತಾರೆ.

Bengaluru: ಈ ಮಹಿಳೆಯ ಧ್ವನಿಯಲ್ಲಿರುವ ಕೋಪ, ತಾಪ, ಹತಾಷೆ ಮತ್ತು ಅಸಹಾಯಕತೆ ಯಾರಿಗಾದರೂ ಅರ್ಥಾವಾಗುವಂಥದ್ದು. ನಿನ್ನೆ ಅಂದರೆ ಗುರುವಾರ ಬೆಳಗ್ಗೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಆ್ಯಸಿಡ್ ದಾಳಿಗೊಳಗಾಗಿ (acid attack) ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಡಿ ಚೇತರಿಸಿಕೊಳ್ಳುತ್ತಿರುವ 24-ವರ್ಷ ವಯಸ್ಸಿನ ಯುವತಿಯ ಚಿಕ್ಕಮ್ಮ ಇವರು, ಹೆಸರು ರತ್ನಮ್ಮ (Ratnamma). ಒಬ್ಬ ಹೇಡಿಯಂತೆ ಯುವತಿಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿರುವ ಒಂದು ಗಾರ್ಮೆಂಟ್ಸ್ ಫ್ಯಾಕ್ಟರಿಯ ಮಾಲೀಕ ನಾಗೇಶ (Nagesh) ಯಾವುದೋ ಬಿಲದಲ್ಲಿ ಅಡಗಿ ಕೂತಿದ್ದಾನೆ. ಅವನು ಪಾತಾಳದಲ್ಲಿ ಅಡಗಿ ಕೂತಿದ್ದರೂ ಪೊಲೀಸರು ಬಗೆದು ತೆಗೆಯುತ್ತಾರೆ, ಅದು ಬೇರೆ ವಿಷಯ. ತಮ್ಮ ಮಗಳ ಬದುಕನ್ನು ನರಕಸದೃಶ ಮಾಡಿರುವ ನಾಗೇಶ ಹೆಸರಿನ ದುಷ್ಟನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ರತ್ನಮ್ಮ ಹೇಳುತ್ತಾರೆ.

ನಾಗೇಶನನ್ನು ಹುಡುಕಿಕೊಡಿ ಅಂತ ಅವರು ಮಾಧ್ಯಮದವರಿಗೆ ಮನವಿ ಮಾಡುತ್ತಿದ್ದಾರೆ. ತನಗೂ ತಾಯಿಯ ರೂಪದಲ್ಲಿ ಒಬ್ಬ ಹೆಣ್ಣುಮಗಳು ಮನೆಯಲ್ಲಿದ್ದಾಳೆ ಎಂಬ ಅರಿವು ಅವನಿಗಿಲ್ಲವೇ? ರಸ್ತೆ ಮೇಲೆ ಓಡಾಡುವ ಮಹಿಳೆಯರು ಹೀಗೆ ದಾಳಿಗೊಳಗಾದರೆ ಏನು ಗತಿ ಅಂತ ರತ್ನಮ್ಮ ಕೇಳುತ್ತಾರೆ.

ದೇಹದ ಯಾವುದಾದರೂ ಒಂದು ಭಾಗದಲ್ಲಿ ಆ್ಯಸಿಡ್ ಬಿದ್ದಿದ್ದರೆ ಪ್ರಾಯಶಃ ಅವಳ ಯಾತನೆ ಕಡಿಮೆಯಾಗಿರುತಿತ್ತು. ಆದರೆ, ಅವಳ ಮೈಮೇಲೆಲ್ಲ ಅವನು ಆ್ಯಸಿಡ್ ಎರಚಿದ್ದಾನೆ. ಅವಳು ಚೇತರಿಸಿಕೊಳ್ಳಲು ಇನ್ನೆಷ್ಟು ದಿನಗಳು ಬೇಕೋ? ಚಿನ್ನೂ ಅಂತ ಕರೆದಾಗ ಅಮ್ಮ ಅಂತ ಒಂದು ಶಬ್ದ ಮಾತ್ರ ಅವಳ ಬಾಯಿಂದ ಬರುತ್ತದೆ, ಮತ್ತೇನೂ ಇಲ್ಲ, ಎಂದು ರತ್ನಮ್ಮ ಹೇಳುತ್ತಾರೆ.

ಇದನ್ನೂ ಓದಿ:   ಆ್ಯಸಿಡ್ ದಾಳಿಗೊಳಗಾದ ಯುವತಿಯ ಆರೋಗ್ಯ ಸ್ಥಿರವಾಗಿದೆ, ಅದರೆ ಗುಣಮುಖಳಾಗಲು ಸಮಯ ಹಿಡಿಯಲಿದೆ: ಡಾಕ್ಟರ್